ಅಯೋಧ್ಯೆಯಲ್ಲಿ ಮಹಿಳೆಯೊಬ್ಬರ ಮನೆಗೆ ತೆರಳಿ ಟೀ ಕುಡಿದ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ರಾಮಜಪ ಜೋರಾಗುವಂತೆ ಮಾಡಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣ  ಉದ್ಘಾಟನೆ, ಅಮೃತ ಭಾರತ ರೈಲುಗಳಿಗೆ ಚಾಲನೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.

ಅಯೋಧ್ಯೆ ಭೇಟಿ ವೇಳೆ ನರೇಂದ್ರ ಮೋದಿ ಅವರು ಮೀರಾ ಮಾಂಝಿ ಎಂಬ ಮಹಿಳೆಯೊಬ್ಬರ ಮನೆಗೆ ದಿಢೀರ್‌ ಭೇಟಿ ನೀಡಿದ್ದು, ಅವರ ಮನೆಯಲ್ಲಿ ಚಹಾ ಕೂಡ ಸವಿದರು.

ಯಾರಿವರು ಮೀರಾ ಮಾಂಝಿ?
ಮೀರಾ ಮಾಂಝಿ ಅವರು ಗೃಹಿಣಿಯಾಗಿದ್ದು, ಅಯೋಧ್ಯೆಯಲ್ಲಿ ಪತಿ, ಅತ್ತೆ-ಮಾವ ಹಾಗೂ ಮಕ್ಕಳ ಜತೆ ವಾಸಿಸುತ್ತಿದ್ದಾರೆ. ಇವರು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿ  ಹಾಗಾಗಿ, ನರೇಂದ್ರ ಮೋದಿ ಅವರು ಮೀರಾ ಮಾಂಝಿ ಅವರ ಮನೆಗೆ ದಿಢೀರನೆ ಭೇಟಿ ನೀಡಿ, ಅವರ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಹಾಗೆಯೇ, ಅವರ ಮನೆಯಲ್ಲಿ ಚಹಾ ಕೂಡ ಕುಡಿದರು. ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆಯೇ ಪಿಎಂ ಉಜ್ವಲ ಯೋಜನೆಯಾಗಿದೆ.

ಮೋದಿ ಬರುವುದು ಗೊತ್ತಿರಲಿಲ್ಲ

ನರೇಂದ್ರ ಮೋದಿ ಅವರು ಭೇಟಿ ನೀಡುವ ವಿಷಯವು ಮೀರಾ ಮಾಂಝಿ ಅವರಿಗೆ ಗೊತ್ತೇ ಇರಲಿಲ್ಲ. ಅವರಿಗೆ ತಿಳಿಸಿದೆಯೇ ಮೋದಿ ಸರ್‌ಪ್ರೈಸ್‌ ವಿಸಿಟ್‌ ಮಾಡಿದ್ದಾರೆ. ‘ನರೇಂದ್ರ ಮೋದಿ ಅವರು ನಮ್ಮ ಮನೆಗೆ ಬರುತ್ತಾರೆ ಎಂಬ ವಿಷಯವೇ ಗೊತ್ತಿರಲಿಲ್ಲ. ನನ್ನ ಪಾಡಿಗೆ ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ಇನ್ನೇನು ಅಡುಗೆ ಮುಗಿಯಬೇಕು ಎನ್ನುವಷ್ಟರಲ್ಲಿ ನರೇಂದ್ರ ಮೋದಿ ಅವರು ನಮ್ಮ ಮನೆಯತ್ತ ಬರುವುದನ್ನು ನೋಡಿದೆ. ಇದು ಕನಸೋ ಏನೋ ಎನ್ನುವಷ್ಟರಲ್ಲಿ ಅವರ ನಮ್ಮ ಮನೆಗೆ ಬಂದರು. ನಾನೇ ಅವರನ್ನು ಸ್ವಾಗತಿಸಿದೆ’ ಎಂದು ಮೋದಿ ಭೇಟಿ ಬಳಿಕ ಮೀರಾ ಮಾಂಝಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!