April 15, 2026
Wednesday, April 15, 2026
spot_img

SHOCKING | ಶಿಕ್ಷಕಿ ಕೆನ್ನೆಗೆ ಹೊಡೆದ ಏಟಿಗೆ ವಿದ್ಯಾರ್ಥಿನಿ ಸಂಪೂರ್ಣ ಕಿವುಡಿಯಾದ್ಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳನ್ನು ಡಿಸಿಪ್ಲಿನ್‌ ಮಾಡೋ ಕೆಲಸ ಶಿಕ್ಷರದ್ದು, ಸಣ್ಣ ಮಟ್ಟದ ಹೊಡೆತ ಕೂಡ ಎಷ್ಟೋ ಪೋಷಕರಿಗೆ ಒಕೆ. ಆದರೆ ಜೀವಕ್ಕೆ, ಜೀವನಕ್ಕೆ ಸಮಸ್ಯೆಯಾಗುವಂತಹ ಶಿಕ್ಷೆ ಕೊಟ್ಟರೆ ಅವರು ಶಿಕ್ಷಕರೇ ಅಲ್ಲ!

ಇಲ್ಲೊಬ್ಬ ಶಿಕ್ಷಕಿ ವಿದ್ಯಾರ್ಥಿನಿ ಹೋಮ್‌ ವರ್ಕ್‌ ಮಾಡಿಕೊಂಡು ಬಂದಿಲ್ಲ ಎನ್ನುವ ಕಾರಣಕ್ಕೆ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದಾಗಿ ಬಾಲಕಿ ಸಂಪೂರ್ಣವಾಗಿ ಕಿವುಡಿಯಾಗಿದ್ದಾಳೆ.

ಗಾಂಧಿನಗರದ ಶಾಲೆಯೊಂದರ ಶಿಕ್ಷಕಿ 14 ವರ್ಷದ ವಿದ್ಯಾರ್ಥಿನಿಯ ಎಡಗೆನ್ನೆಗೆ ಜೋರಾಗಿ ಕಪಾಳಮೋಕ್ಷ ಮಾಡಿದ್ದಾಳೆ. ಆ ಹೊಡೆತದಿಂದ ವಿದ್ಯಾರ್ಥಿನಿಯ ಕಿವಿಯ ತಮಟೆ ಹರಿದು ಹೋಗಿದೆ. ನಂತರ ವೈದ್ಯರು ಬಾಲಕಿಯು ಶಾಶ್ವತವಾಗಿ ಶ್ರವಣ ಶಕ್ತಿ ಕಳೆದುಕೊಂಡಿದ್ದಾಳೆ ಎಂದು ದೃಢಪಡಿಸಿದ್ದಾರೆ.

ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದು, ಶಿಕ್ಷಕಿಗೆ ಮೂರು ತಿಂಗಳ ಜೈಲುಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !