October 11, 2026
Sunday, October 11, 2026
spot_img

ಚಿಂತಾಮಣಿಯಲ್ಲಿ ಒಂದು ರೂಪಾಯಿಗೆ ಒಂದು ಟೀ ಶರ್ಟ್‌, ಜನಸಾಗರ! ಭಾರೀ ಟ್ರಾಫಿಕ್‌ ಜಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೇಲ್‌ ಆಫರ್ಸ್‌ ಅಂದ್ರೆ ಜನ ಅಂಗಡಿಗಳ ಮುಂದೆ ಮುಗಿಬೀಳೋದು ಸಾಮಾನ್ಯ. ಆದರೆ ಇಲ್ಲೊಂದು ಅಂಗಡಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಒಂದು ರೂಪಾಯಿಗೆ ಒಂದು ಟೀ ಶರ್ಟ್‌ ನೀಡಿದೆ.

ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಹೊಸ ಬಟ್ಟೆ ಅಂಗಡಿಯೊಂದು ಓಪನ್‌ ಆಗಿದೆ, ಉದ್ಘಾಟನೆ ದಿನ ಒಂದು ರೂಪಾಯಿಗೆ ಒಂದು ಟೀ ಶರ್ಟ್‌ ಎನ್ನುವ ಆಫರ್‌ ನೀಡಲಾಗಿದೆ. ಇದರಿಂದಾಗಿ ಅಂಗಡಿ ಓಪನ್‌ ಆಗೋಕೂ ಮುಂಚೆಯೇ ಜನರು ಆಗಮಿಸಿದ್ದಾರೆ.

ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ ಕಾರಣ ನೂಕುನುಗ್ಗಲು ಉಂಟಾಗಿದ್ದು, ಟ್ರಾಫಿಕ್‌ ಜಾಮ್‌ ಕೂಡ ಆಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜನರನ್ನು ಚದುರಿಸಿ ವಾಹನಗಳು ಹೋಗೋದಕ್ಕೆ ದಾರಿ ಮಾಡಿದ್ದಾರೆ. ನೀವು ಬಟ್ಟೆ ತಗೊಳ್ಳಿ ಬೇಡ ಅನ್ನೋದಿಲ್ಲ ಆದರೆ ಇತರರಿಗೆ ತೊಂದರೆ ಮಾಡಬೇಡಿ ಎಂದು ಹೇಳಿದ್ದಾರೆ.

ಚಿಂತಾಮಣಿಯ ಬೆಂಗಳೂರು ಮುಖ್ಯರಸ್ತೆಯಲ್ಲಿರುವ ಅಲಕ್ಸಿ ಎಂಬ ಹೆಸರಿನ ಹೊಸ ಬಟ್ಟೆ ಅಂಗಡಿ ಈ ವಿಶೇಷ ಆಫರ್ ನೀಡಿತ್ತು. ಮೊದಲ 100 ಗ್ರಾಹಕರಿಗೆ 1 ರೂ.ಗೆ ಒಂದು ಟೀ-ಶರ್ಟ್ ನೀಡುವುದಾಗಿ ಅಂಗಡಿ ಮಾಲೀಕರು ಘೋಷಿಸಿದ್ದರು.

Must Read