ತಮಿಳುನಾಡಿನ ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ, ಛಿದ್ರವಾದ ಸ್ಥಿತಿಯಲ್ಲಿ ಮೂರು ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳುನಾಡಿನ ವಿರುದುನಗರ ಜಿಲ್ಲೆಯ ಕರಿಯಾಪಟ್ಟಿ ಪ್ರದೇಶದಲ್ಲಿ ಬುಧವಾರ ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಮೂವರ ಮೃತದೇಹ ಛಿತ್ರ ಸ್ಥಿತಿಯಲ್ಲಿ ದೊರಕಿದೆ.
ಭಾರೀ ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇನ್ನೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಶೇಖರಣಾ ಕೊಠಡಿಯಲ್ಲಿ ಸ್ಫೋಟಕಗಳಿದ್ದು ಅಲ್ಲೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ರಕ್ಷಣಾ ತಂಡಗಳು ಅವಶೇಷಗಳನ್ನು ಎಚ್ಚರಿಕೆಯಿಂದ ತೆರವುಗೊಳಿಸುತ್ತಿವೆ ಮತ್ತು ಸ್ಫೋಟಗೊಳ್ಳದ ವಸ್ತುಗಳನ್ನು ಹುಡುಕುತ್ತಿವೆ.

ಸುರಕ್ಷತಾ ಅಪಾಯಗಳು ಮತ್ತು ಓವರ್‌ಲೋಡ್ ಟ್ರಕ್‌ಗಳನ್ನು ಒಳಗೊಂಡ ಅನೇಕ ವಿಚಾರಗಳ ಬಗ್ಗೆ ಹಲವು ದಿನಗಳಿಂದ ದೂರು ಬರುತ್ತಿತ್ತು. ಸ್ಫೋಟದ ಮೊದಲು ಕ್ವಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!