CINE | ಬರ್ತಿದೆ ರಜನೀಕಾಂತ್‌ ಬಯೋಪಿಕ್‌, ಧನುಷ್‌ ಹೀರೋನಾ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೆಜೆಂಡರಿ ಆಕ್ಟರ್‌ ರಜನೀಕಾಂತ್‌ ಬಯೋಪಿಕ್‌ ನಿರ್ಮಾಣಕ್ಕೆ ತಯಾರಾಗ್ತಾ ಇದೆ. ಈ ಹಿಂದೆ ಕೂಡ ಸಾಕಷ್ಟು ಸುದ್ದಿಗಳು ವೈರಲ್‌ ಆಗಿತ್ತು.

ಅಂತೆಯೇ ಈ ಬಾರಿ ಕೂಡ ಇಂಟ್ರೆಸ್ಟಿಂಗ್‌ ವಿಚಾರ ಒಂದು ರಿವೀಲ್‌ ಆಗಿದೆ. ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್​ ಹಾಗೂ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದವರು ಸಾಜಿದ್ ನಾಡಿಯಾದ್ವಾಲ. ಅವರು ರಜನಿಕಾಂತ್ ಬಯೋಪಿಕ್​ಗೆ ಬಂಡವಾಳ ಹೂಡುತ್ತಿದ್ದಾರೆ. ಭಾರತದ ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ.

ರಜನಿಕಾಂತ್ ಬಯೋಪಿಕ್ ಸದ್ಯ ಆರಂಭದ ಹಂತದಲ್ಲಿದೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ರಜನಿಕಾಂತ್ ಬಯೋಪಿಕ್ ಎಂದಾಗ ಕುತೂಹಲ ಜಾಸ್ತಿ. ಈ ಹಿಂದೆ ಕೂಡ ಧನುಷ್‌ ರಜನೀಕಾಂತ್‌ ಬಯೋಪಿಕ್‌ನಲ್ಲಿ ಆಕ್ಟ್‌ ಮಾಡೋ ಆಸೆ ವ್ಯಕ್ತಪಡಿಸಿದ್ದರು. ಅವರೇ ನಾಯಕ ಆಗ್ತಾರಾ? ನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!