ಬೈಕ್‌, ಕ್ಯಾಂಟರ್‌ ನಡುವೆ ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ ಭೀಕರ ಬೈಕ್ ಕ್ಯಾಂಟರ್ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹುಣಸೂರಿನ ಕನಕ ಭವನ ಬಳಿ ನಡೆದ ಅಪಘಾತದಲ್ಲಿ ರಾಜು (64) ಮತ್ತು ಅವರ ಪತ್ನಿ ಸುನಂದಾ (55) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹುಣಸೂರು ಕಡೆಯಿಂದ ಬಂದ ಕ್ಯಾಂಟರ್ ಲಾರಿ ಅವರ ಬೈಕ್ ಗೆ ಅತೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.ಅಪಘಾತ ನಡೆಸಿ ವಾಹನ ನಿಲ್ಲಿಸದೆಯೇ ಗೂಡ್ಸ್‌ ಚಾಲಕ ಪರಾರಿಯಾಗಿದ್ದಾನೆ. ಸಾರ್ವಜನಿಕರೇ ಬೆನ್ನಟ್ಟಿ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!