ಔಷಧಿ ಶಿಫಾರಸು ಮಾಡಲು ಸಾವಿರ ಕೋಟಿಯ ಗಿಫ್ಟ್: ಡೋಲೋಗೆ ಜ್ವರ ಹಿಡಿಸಿದ ಐಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೋಲೋ-650 ಮಾತ್ರೆಗಳನ್ನು ಶಿಫಾರಸು ಮಾಡಿ ಎಂದು ಬರೋಬ್ಬರಿ 1 ಸಾವಿರ ಕೋಟಿ ರೂ. ಉಚಿತ ಉಡುಗೊರೆಯನ್ನು ವೈದ್ಯರಿಗೆ ಮಾತ್ರೆ ತಯಾರಕರು ವಿತರಿಸಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ ಆರೋಪಿಸಿರುವುದಾಗಿ ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ರೋಗಿಗಳಿಗೆ ಜ್ವರ ನಿವಾರಕ ಔಷಧವನ್ನು ಶಿಫಾರಸು ಮಾಡಲು ಡೋಲೋ ಕಂಪನಿ 1,000 ಕೋಟಿ ಹೂಡಿಕೆ ಮಾಡಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಇದು ಗಂಭೀರ ಸಮಸ್ಯೆಯಾಗಿದೆ ಮತ್ತು ಅವರು ಕೋವಿಡ್-19 ಸೋಂಕಿಗೆ ಒಳಗಾದಾಗಲೂ ಸಹ ಅದೇ ರೀತಿ ಸೂಚಿಸಲಾಗಿದೆ ಎಂದು ಹೇಳಿದರು. ಇನ್ನು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರೆಮ್ಡಿಸಿವಿರ್ ಔಷಧಿಯ ಅತಿಯಾದ ಮಾರಾಟ ಮತ್ತು ಶಿಫಾರಸು ಉದಾಹರಣೆಯನ್ನು ಅರ್ಜಿದಾರರು ಸೂಚಿಸಿದರು. ವೈದ್ಯರಿಗೆ ತಮ್ಮ ಔಷಧಿ ಶಿಫಾರಸು ಮಾಡಲು ಉತ್ತೇಜಕವಾಗಿ ಉಚಿತವಾಗಿ ನೀಡುತ್ತಿರುವ ಔಷಧೀಯ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಿರ್ದೇಶನ ಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸುತ್ತಿದೆ.

ಕೆಳವು ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆಯು ಸಿಕ್ಕಿಂ, ಪಂಜಬ್, ಗೋವಾ, ತಮಿಳುನಾಡು, ಬೆಂಗಳೂರು ಸೇರಿದಂತೆ ಏಕ ಕಾಲಕ್ಕೆ ಒಂಬತ್ತು ರಾಜ್ಯಗಳಲ್ಲಿ ದಾಳಿ ನಡೆಸಿತ್ತು. ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ನ ಕೇಂದ್ರ ಕಚೇರಿ ಸೇರಿದಂತೆ ೪೦ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು.
ಈ ವೇಳೆ, ’ಮಾರಾಟ ಮತ್ತು ಪ್ರಚಾರ’ ಎಂಬ ಶೀರ್ಷಿಕೆಯಡಿಯಲ್ಲಿ ವೈದ್ಯಕೀಯ ವೃತ್ತಿಪರರಿಗೆ ಉಚಿತ ವಿತರಣೆಗಳನ್ನು ನೀಡುತ್ತಿರುವುದು ಕಂಡು ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!