ಪಾಕಿಸ್ತಾನ ಗಡಿ ದಾಟಿ ಭಾರತದೊಳಕ್ಕೆ ಬಂದು ಸುತ್ತಾಡಿದ ಮೂರು ವರ್ಷದ ಮಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ಥಾನದ ಗಡಿದಾಟಿ ಭಾರತ ಪ್ರವೇಶಿಸಿದ್ದ ಮೂರು ವರ್ಷದ ಮಗುವೊಂದನ್ನು ಭಾರತದ ಭದ್ರತಾಪಡೆ ಮತ್ತೆ ಹೆತ್ತವರ ಮಡಿಲು ಸೇರಿಸಿದ್ದಾರೆ.
ಪಂಜಾಬ್ ಭಾಗದಲ್ಲಿ ಭಾರತವು ಪಾಕ್ ಜೊತೆ ಗಡಿ ಹಂಚಿಕೊಂಡಿದ್ದು, ಈ ಭಾಗದಲ್ಲಿ ಆಟವಾಡುತಿದ್ದ ಮಗು ಅರಿಯದೆ ಭಾರತದೊಳಕ್ಕೆ ನುಸುಳಿತ್ತು. ರಾತ್ರಿ ವೇಳೆ ಮಗು ದಾರಿ ಕಾಣದೆ ಸುತ್ತಾಡುತ್ತಿದ್ದು, ಇದನ್ನು ಕಂಡ ಭದ್ರತಾ ಪಡೆ ತಕ್ಷಣವೇ ಪಾಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಹಿಂದಿರುಗಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!