ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡದಿಂದ ಬೆಳಗಾವಿಗೆ ಬಂದ ಪ್ಯಾಸೆಂಜರ್ ರೈಲಿನಲ್ಲಿ ಮೂರು ವರ್ಷದ ಬಾಲಕಿ ಶವ ಪತ್ತೆಯಾಗಿದೆ.
ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ ಬೆಳಗಾವಿಗೆ ಬಂದಿದೆ. ಈ ವೇಳೆ ಎಸ್ 3 ಕೋಚ್‌ನ 20ನೇ ಸೀಟ್‌ನ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಸಂಜೆ ನಾಲ್ಕು ಗಂಟೆ ವೇಳೆಗೆ ಸಿಬ್ಬಂದಿ ಕ್ಲೀನಿಂಗ್‌ಗೆ ಬಂದಿದ್ದು, ಮಗುವಿನ ಮೃತದೇಹ ನೋಡಿ ಬೆಚ್ಚಿಬಿದ್ದಿದ್ದಾರೆ. ಗುಲಾಬಿ ಬಣ್ಣದ ಫ್ರಾಕ್ ಹಾಕಿರುವ ಬಾಲಕಿಯ ಮೃತದೇಹದ ಬಗ್ಗೆ ಇನ್ಯಾವುದೇ ಮಾಹಿತಿ ದೊರೆತಿಲ್ಲ.
ರೈಲ್ವೆ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಲಾಗಿದೆ. ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎನ್ನಲಾಗಿದೆ.