Thursday, March 30, 2023

Latest Posts

ಸಿಬ್ಬಂದಿಗೆ ಸ್ವಯಂ ನಿವೃತ್ತಿ ಆಫರ್‌ ನೀಡಿದ ಏರ್‌ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಸ್ತುತ ಟಾಟಾ ಒಡೆತನದಲ್ಲಿರುವ ಏರ್‌ ಇಂಡಿಯಾವು ತನ್ನ ನಾನ್‌-ಫ್ಲೈಯಿಂಗ್‌ ಸಿಬ್ಬಂದಿಗೆ ಸ್ವಯಂ ನಿವೃತ್ತಿಯ ಆಫರ್‌ ಮುಂದಿಟ್ಟಿದೆ. ನಷ್ಟದಲ್ಲಿದ್ದ ಏರ್‌ ಇಂಡಿಯಾವನ್ನು ಕಳೆದ ವರ್ಷ ಟಾಟಾ ಕಂಪನಿಯು ಸ್ವಾಧೀನಪಡಿಸಿಕೊಂಡಿತ್ತು. ಟಾಟಾ ಒಡೆತನಕ್ಕೆ ಬಂದಮೇಲೆ ಇದು ಎರಡನೇ ಕೊಡುಗೆಯಾಗಿದೆ. 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ಮತ್ತು ಕನಿಷ್ಠ ಐದು ವರ್ಷಗಳ ನಿರಂತರ ಸೇವೆಯನ್ನು ಏರ್‌ಲೈನ್‌ನಲ್ಲಿ ಪೂರ್ಣಗೊಳಿಸಿದ ಸಾಮಾನ್ಯ ಕೇಡರ್‌ ಅಧಿಕಾರಿಗಳಿಗೆ ಈ ಕೊಡುಗೆ ನೀಡಲಾಗಿದೆ.

ಕನಿಷ್ಠ ಐದು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ ಕ್ಲರಿಕಲ್ ಮತ್ತು ಕೌಶಲ್ಯರಹಿತ ವರ್ಗದ ನೌಕರರಿಗೂ ಈ ಆಫರ್‌ ನೀಡಲಾಗಿದೆ. ಒಟ್ಟು 2,100 ಉದ್ಯೋಗಿಗಳು ಇತ್ತೀಚಿನ ಸ್ವಯಂ ನಿವೃತ್ತಿ ಕೊಡುಗೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ವಿಮಾನಯಾನ ಸಂಸ್ಥೆಯು ಫ್ಲೈಯಿಂಗ್ ಮತ್ತು ನಾನ್ ಫ್ಲೈಯಿಂಗ್ ಸಿಬ್ಬಂದಿ ಸೇರಿದಂತೆ ಸುಮಾರು 11,000 ಜನರ ಸಿಬ್ಬಂದಿ ಬಲವನ್ನು ಹೊಂದಿದೆ.

ಈ ಹಿಂದೆ ಜೂನ್ 2022 ರಲ್ಲಿ, ಏರ್ ಇಂಡಿಯಾ ಸ್ವಯಂಪ್ರೇರಿತ ನಿವೃತ್ತಿ ಕೊಡುಗೆಯ ಮೊದಲ ಹಂತವನ್ನು ಪ್ರಾರಂಭಿಸಿತ್ತು. ಇದೀಗ ಎರಡನೇ ಬಾರಿ ಇಂತಹ ಕೊಡುಗೆ ನೀಡಿದೆ. ಈ ಹಿಂದೆ 1500 ಜನರು ಸ್ವಯಂ ನಿವೃತ್ತಿ ಕೊಡುಗೆಯನ್ನು ಆಯ್ದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!