ಪ್ರವಾಸಕ್ಕೆ ಹೊರಟ ಬಸ್ ನಡು ರಸ್ತೆಯಲ್ಲಿ ಪಲ್ಟಿ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದ ಪ್ರಯಾಗ​ರಾಜ್​​ನಲ್ಲಿ ಶಾಲಾ ಬಸ್​ ಪಲ್ಟಿಯಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಜೌನ್​​ಪುರದ ಹಳ್ಳಿಯೊಂದರ ಶಾಲಾ ಮಕ್ಕಳು ಯಾಗರಾಜ್​​ಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಈ ವೇಳೆ ದ ಚಲಿಸುತ್ತಿದ್ದ ಬಸ್​ಗೆ ಅಡ್ಡಬಂದ ಬೈಕ್​ ಸವಾರನನ್ನು ತಡೆಯಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಬಸ್​ ನಡುರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಇದರಿಂದ 12 ಮಕ್ಕಳು ಸೇರಿ ಒಟ್ಟು 35 ಮಂದಿ ಗಾಯಗೊಂಡಿದ್ದಾರೆ.

ಬಸ್​ ಅಪಘಾತಕ್ಕೀಡಾದ ವಿಷಯವನ್ನು ಸ್ಥಳೀಯರು ಹಂಡಿಯಾ ಪೊಲೀಸ್​ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಮೃತಪಟ್ಟ ಇಬ್ಬರು ಮಕ್ಕಳನ್ನು ಅಂಕಿತ್​ ಮತ್ತು ಅನುರಾಗ್​ ಎಂದು ಗುರುತಿಸಲಾಗಿದೆ.

ಈ ಬಸ್​ ಅಲ್ಲಿ 75 ಮಕ್ಕಳು, 8 ಮಂದಿ ಶಾಲಾ ಶಿಕ್ಷಕರು ಸೇರಿ ಒಟ್ಟು 83 ಜನರಿದ್ದರು. ಚಾಲಕ ಬಸ್​​ನ್ನು ತುಂಬ ವೇಗವಾಗಿ ಡ್ರೈವ್​ ಮಾಡುತ್ತಿದ್ದ. ಹಂಡಿಯಾದ ಹೆದ್ದಾರಿಯಲ್ಲಿ, ಬೈಕ್​ ಸವಾರನೊಬ್ಬನಿಗೆ ಡಿಕ್ಕಿಯಾಗುವ ಸನ್ನಿವೇಶ ಬಂದಾಗ ಚಾಲಕ ಅದನ್ನು ತಪ್ಪಿಸಲು ಮುಂದಾದಾಗ ಸಂಪೂರ್ಣ ನಿಯಂತ್ರಣ ಕಳೆದುಕೊಂಡ. ಆಗಲೇ ಬಸ್​ ಅಪಘಾತಕ್ಕೀಡಾಗಿದೆ’ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ಅಭಿಷೇಕ್​ ಅಗರ್​ವಾಲ್​ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!