ದಿನಭವಿಷ್ಯ: ಮಿಶ್ರ ಫಲ, ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು

ಮೇಷ
ಹೆಚ್ಚುವರಿ ಹೊಣೆ. ಆದರೆ ಸೂಕ್ತ ಸಹಕಾರ ಸಿಗಲಿದೆ. ಆದಾಯ ಹೆಚ್ಚಳಕ್ಕೆ ಪ್ರಯತ್ನ ಪಡುವಿರಿ. ಬಂಧುಗಳ ಜತೆ ಕೂಡಿ ಕಳೆಯುವ ಅವಕಾಶ.

ವೃಷಭ
ಸಹೋದ್ಯೋಗಿ ನಿಮಗೆ ಸಮಸ್ಯೆ ಸೃಷ್ಟಿಸಬಹುದು. ದುಡುಕಿನಿಂದ ವರ್ತಿಸದಿರಿ. ವಿವೇಕದಿಂದ ಸಮಸ್ಯೆ ಪರಿಹರಿಸಿ. ಕೌಟುಂಬಿಕ ಸಹಕಾರ, ಸಮಾಧಾನ.

ಮಿಥುನ
ಮಾನಸಿಕ ಒತ್ತಡವು ಇತರ ಪ್ರಮುಖ ವಿಷಯಗಳತ್ತ ಗಮನ ಹರಿಸದಂತೆ ಮಾಡಬಹುದು. ಸಂಗಾತಿ ಜತೆ ಭಿನ್ನಾಭಿಪ್ರಾಯ.

ಕಟಕ
ಕುಟುಂಬ ಸದಸ್ಯರ ಜತೆ ಅಹಂ ಬಿಟ್ಟು ವರ್ತಿಸಿ. ನಿಮ್ಮದೇ ಮಾತು ನಡೆಯಬೇಕು ಎಂಬ ಭಾವನೆ ಬಿಡಿ. ಇಲ್ಲವಾದರೆ ಶಾಂತಿ ಮರೀಚಿಕೆಯಾದೀತು.

ಸಿಂಹ
ಮಾನಸಿಕ ಒತ್ತಡ. ಇದು ನಿಮ್ಮ ವರ್ತನೆಯಲ್ಲೂ ಪ್ರತಿಫಲಿಸಬಹುದು. ಇತರರ ಜತೆ ವ್ಯವಹರಿಸುವಾಗ ಸಮಾಧಾನ ಕಾಯ್ದುಕೊಳ್ಳಿ.

ಕನ್ಯಾ
ಭಾವನಾತ್ಮಕ ಸಂಘರ್ಷ. ಆಪ್ತರೊಬ್ಬರು ನೋವು ನೀಡುತ್ತಾರೆ. ದೃಢ ಮನಸ್ಥಿತಿ ಅವಶ್ಯ.  ಹೆಚ್ಚುವರಿ ಖರ್ಚು. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ.

ತುಲಾ
ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿ. ನಿಮ್ಮಿಂದ ಅನುಚಿತ ಮಾತು ಬರದಂತೆಯೂ ನೋಡಿಕೊಳ್ಳಿ. ಒಟ್ಟಿನಲ್ಲಿ ಬಿಕ್ಕಟ್ಟಿಗೆ ಸಿಲುಕದಂತೆ ನೋಡಿಕೊಳ್ಳಿ.

ವೃಶ್ಚಿಕ
ಸಮಾಧಾನಕರ ದಿನ. ಸಾಧನೆಯೊಂದು ನಿಮ್ಮ ಮನಸ್ಸಿಗೆ ತೃಪ್ತಿ ನೀಡುತ್ತದೆ. ಸಂಬಂಧದಲ್ಲಿ ಮೂಡಿದ್ದ ವಿರಸ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ.

ಧನು
ಇಂದು ಉತ್ಸಾಹದಿಂದ ದಿನ ಕಳೆಯುವಿರಿ.  ಅದಕ್ಕೆ ಪೂರಕ ವಾತಾವರಣ. ಬಂಧುಗಳಿಂದ ಸಿಹಿ ಸುದ್ದಿ. ದೈಹಿಕ ನೋವು ನಿವಾರಣೆ.

ಮಕರ
ವೃತ್ತಿ ಸಂಬಂಧ ವ್ಯವಹಾರದಲ್ಲಿ ತೊಡಕು ಉಂಟಾದೀತು. ಸಮಾಧಾನದಿಂದ ಅದನ್ನು ನಿಭಾಯಿಸಿ. ಸ್ನೇಹಿತರ ಜತೆ ವಿರಸ ಕಟ್ಟಿಕೊಳ್ಳದಿರಿ.

ಕುಂಭ
ಮನೆಯ ಸದಸ್ಯರ ಜತೆ ಆತ್ಮೀಯವಾಗಿ ಕಾಲ ಕಳೆಯುವಿರಿ. ಪುಟ್ಟ ಮಾತು ಜಗಳಕ್ಕೆ ಎರವಾಗದಂತೆ ನೋಡಿಕೊಳ್ಳಿ. ಖರ್ಚು ಅಧಿಕವಾಗುವುದು.

ಮೀನ
ಅನಾರೋಗ್ಯ ಕಾಡುತ್ತಿದ್ದರೆ ಅದು ನಿವಾರಣೆಯಾಗಲಿದೆ. ಮನೆಯಲ್ಲಿ ಸಂಭ್ರಮ. ಹಣದ ವಿಚಾರದಲ್ಲಿ ಉಂಟಾಗಿದ್ದ ಸಮಸ್ಯೆ ಪರಿಹಾರ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!