ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀರ್ಥಹಳ್ಳಿ ಸಮೀಪದ ತೊರೆಬೈಲುವಿನಲ್ಲಿ ಕೃಷಿ ಪ್ರಯೋಗ ಪರಿವಾರದಿಂದ ಅ.7 ಮತ್ತು 8ರಂದು ಎರಡು ದಿನಗಳ ಕಾಲ ಕೃಷಿ ಬರಹಗಾರರಿಗಾಗಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಲಕ್ಷ್ಮಣ ಕಾರ್ಯಗಾರ ಉದ್ಘಾಟಿಸಿ ಬರವಣಿಗೆಯ ಕೌಶಲ್ಯದ ಕುರಿತು ವಿವರಣೆ ನೀಡಿದರು.
ಕಾರ್ಯಗಾರದಲ್ಲಿ ಹಿಂದೂಸ್ಥಾನ್ ಟೈಮ್ಸ್ ಕನ್ನಡ ವೆಬ್‌ಸೈಟ್‌ನ ಸಂಪಾದಕ ಘನಶ್ಯಾಮ, ಸಾಫ್ಟ್‌ವೇರ್-ಕಂ-ಕೃಷಿಕ ವಸಂತ ಕಜೆ, ಸಾಹಿತ್ಯ ಪರಿಷತ್ ನ ಪ್ರಾಂತ ಸಂಘಟಕ ನಾರಾಯಣ ಶೇವಿರೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಎರಡು ದಿನಗಳ ಕಾರ್ಯಗಾರದಲ್ಲಿ ಸಂದರ್ಶನ, ಕ್ಷೇತ್ರಕ್ಕೆ ಹೋಗಿ ರೈತರ ಭೇಟಿ, ಮಾತುಕತೆ, ಬರವಣಿಗೆ, ವಿಡಿಯೋ ರೆಕಾರ್ಡಿಂಗ್ ಇತ್ಯಾದಿ ಕುರಿತು ಪ್ರಾತ್ಯಕ್ಷಿಕೆ ಪ್ರಯೋಗ ನಡೆಸಲಾಯಿತು. ಮೂಡಬಿದ್ರೆ ಆಳ್ವಾಸ್ ಕಾಲೇಜು, ಉಜಿರೆ ಎಸ್.ಡಿ. ಎಂ.ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಆಸಕ್ತ ಹವ್ಯಾಸಿ ಲೇಖಕರು ಪಾಲ್ಗೊಂಡಿದ್ದರು. ಈ ವೇಳೆ ಕೃಷಿ ಪ್ರಯೋಗ ಪರಿವಾರದ ಅರುಣ್ ಕುಮಾರ್, ಶ್ರೀವತ್ಸ ಉಪಸ್ಥಿತರಿದ್ದರು.