ಮೇಘನಾ ಶೆಟ್ಟಿ, ಶಿವಮೊಗ್ಗ
ನಿಜ ಹೇಳಿ, Women’s dayಗೆ ಸಿಗುವಷ್ಟು ಮಹತ್ವ Men’sಡೇಗೆ ಸಿಗೋದಿಲ್ಲ ಅಲ್ವಾ? ಮಹಿಳೆಯರ ಮಲ್ಟಿಟಾಸ್ಕಿಂಗ್ ಸ್ಕಿಲ್ಸ್, ಅವರ ಧೈರ್ಯ, ಆತ್ಮವಿಶ್ವಾಸ, ತಾಯಿಯಾಗಿ, ಮಡದಿಯಾಗಿ, ಮಗಳಾಗಿ ಅವರ ರೋಲ್ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ, ಅದರ ಬಗ್ಗೆ ಮಾತನಾಡುವಷ್ಟು ಸಮಯ ಇದೆ. ಆದರೆ ಪುರುಷರ ಬಗ್ಗೆ ಮಾತು ಹೊರಗೆ ಬರೋದು ಕಡಿಮೆ. ಅವರ ಸ್ಯಾಕ್ರಿಫೈಸ್ ಜಗತ್ತಿನ ಕಣ್ಣಿಗೆ ಕಾಣೋದು ಕೂಡ ಕಡಿಮೆ. ಪ್ರತಿದಿನವೂ ಪುರುಷರನ್ನು ಹೊಗಳೋದಿಲ್ಲ, ಆದರೆ ಇಂದು MEN’S DAY, ಈ ದಿನ ಅವರಿಗಾಗಿ ಮೀಸಲಿಡೋಣ, ಅವರಿಲ್ಲದೆ ಹೆಣ್ಮಕ್ಕಳ ಲೈಫ್ ಕೂಡ ಅಪೂರ್ಣ ಅನ್ನೋದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ..
ಹೆಣ್ಣುಮಕ್ಕಳ ಬ್ಲಿಂಕ್‌ಇಟ್, ಸ್ವಿಗ್ಗಿ ಇನ್ಸ್ಟಾಮಾರ್ಟ್ ಎಲ್ಲರೂ ಗಂಡಸರೇ, ಅಮ್ಮ ಅಡುಗೆ ಮನೆಯಲ್ಲಿ ಒಲೆ ಮೇಲೆ ಬಾಣಲಿ ಇಟ್ಟ ನಂತರ ” ಶೇಂಗಾಬೀಜ, ಕೊತ್ತಂಬರಿ ತಗೊಂಡ್ ಬಾರೋ” ಎಂದು ಕೂಗಿದರೂ ಸಾಕು, ಸಾಸಿವೆ ಸಿಡಿಯುವಷ್ಟ್ರರಲ್ಲಿ ಶೇಂಗಾಬೀಜ, ಕೊತ್ತಂಬರಿ ಅಡುಗೆ ಮನೆಯ ಸ್ಲಾಬ್ ಮೇಲಿರುತ್ತದೆ. ಸಖರ್ ಸ್ಪೀಡ್ ಸರ್ವೀಸ್ ಅಲ್ವಾ?
ನಲ್ಲಿ ರಿಪೇರಿ, ಗೀಸರ್ ಶೆಲ್ ಬದಲಾಯಿಸೋಕೆ, ತೆಂಗಿನಕಾಯಿ ಒಡೆದುಕೊಡೋಕೆ, ಮನೆಯ ಹೊರಗೆ ಇರು ಎಲ್ಲಾ ಕೆಲಸಕ್ಕೆ, ಸಿಲಿಂಡರ್ ಬದಲಾಯಿಸೋದಕ್ಕೆ, ಶೆಲ್ಫ್‌ನ ಮೇಲಿನ ಸಾಲಿನಲ್ಲಿರೋ ಡಬ್ಬಿ ಎತ್ತಿಕೊಡೋದಕ್ಕೆ, ಮಂಚದಡಿಯ ಕಸ ತೆಗೆಯೋದಕ್ಕೆ, ಬಿಲ್ಸ್ ಕಟ್ಟೋದಕ್ಕೆ, ಅವರಿವರಿಗೆ ಫೋನ್ ಮಾಡೋದಕ್ಕೆ ಎಲ್ಲದಕ್ಕೂ ಗಂಡಸರೇ ಬೇಕು. ಇಷ್ಟಕ್ಕೆ ಇವರ ರೋಲ್ ಸೀಮಿತವಾಗಿರೋದಿಲ್ಲ.
ಪ್ರೀತಿಸೋದಕ್ಕೆ, ಮುದ್ದು ಮಾಡೋದಕ್ಕೆ, ನಾವು ಮಾಡಿದ ಅಡುಗೆ ರುಚಿ ಹೇಗಿದೆ ಎಂದು ಹೇಳೋದಕ್ಕೆ, ಮಗ ಇದ್ದಾನೆ ಎಂದು ಪೋಷಕರು ಹೆಮ್ಮೆ ಪಡೋದಕ್ಕೆ, ನಮ್ಮಣ್ಣಂಗೆ ಗೊತ್ತಾದ್ರೆ ಇದೆ ನಿಮ್ಗೆಲ್ಲಾ ಅಂತ ತಂಗಿ ಧಮ್ಕಿ ಹಾಕೋದಕ್ಕೆ, ಮಾನಸಿಕ ಧೈರ್ಯ ಕೊಡೋದಕ್ಕೆ ಗಂಡಸರೇ ಬೆಸ್ಟ್.
ನೀವೇ ಯೋಚನೆ ಮಾಡಿ ಎಷ್ಟೋ ಮಂದಿಗೆ ಹುಡುಗಿಯರಿಗಿಂತ ಹುಡುಗರ ಫ್ರೆಂಡ್‌ಶಿಪ್ ಬೆಸ್ಟ್ ಎನಿಸುತ್ತದೆ. ನೀವು ಎಷ್ಟು ಬಾರಿ ಕೋಪ ಮಾಡಿಕೊಂಡರೂ ಅವರೇ ಸಮಾಧಾನ ಮಾಡ್ತಾರೆ, ನಿಮ್ಮ ಜೊತೆ ಯಾರೂ ಮಿಸ್‌ಬಿಹೇವ್ ಮಾಡೋದಕ್ಕೆ ಬಿಡೋದಿಲ್ಲ, ಲವ್ ಮಾಡ್ತಿರೋ ಹುಡುಗ ನಿಜ ರೂಪ ಹೊರಗೆ ತರ್ತಾರೆ, ಬೆಸ್ಟ್ ಪಾರ್ಟ್‌ನರ್ ರೀತಿ ನಿಮ್ಮೆಲ್ಲಾ ವಿಷಯಕ್ಕೂ ಸಾಥ್ ಕೊಡ್ತಾರೆ. ನಂಬಿಕೆಗೆ ಇವರು ಅತೀ ಅರ್ಹರು.
ಮೆನ್ಸ್ ಡೇ ಪ್ರಯುಕ್ತ ಈ ಗಂಡುಮಕ್ಕಳನ್ನು ಖುಷಿಯಾಗಿ ಇಟ್ಟುಕೊಳ್ಳೋದು ಹೇಗೆ ಅನ್ನೋ ಟಿಪ್ಸ್ ಇಲ್ಲಿದೆ, ಇವತ್ತೊಂದಿನ ಅಲ್ಲ, ಸದಾ ಅವರನ್ನು ಖುಷಿಯಾಗಿ ಇಟ್ಟುಕೊಳ್ಳಿ.. Women’s day ದಿನದಂದು ನಿಮ್ಮನ್ನು ಅವರು ಹೇಗೆ ನೋಡ್ಕೋಬೇಕು ಅನ್ನೋ ಸಲಹೆ ನೀಡ್ತೇವೆ..
ನಿಮ್ಮ ಲೈಫ್‌ನಲ್ಲಿರೋ ಹುಡುಗ/ಪುರುಷರನ ಮೂಡ್ ಬಗ್ಗೆ ತಿಳಿದುಕೊಳ್ಳಿ. ಆತ ಬಾಯಿಬಿಟ್ಟು ಮೂಡ್ ಸರಿಯಿಲ್ಲ ಎಂದು ಹೇಳೋದಿಲ್ಲ. ಕೆಲವೊಮ್ಮೆ ಒಬ್ಬರೇ ಇರೋಕೆ ಇಷ್ಟಪಡ್ತಾರೆ ಬಟ್ ನೀವು ಬಿಡೋದಿಲ್ಲ. ಅವರಿಗೆ ಕೋಪ ಬಂದು ಏನಾದ್ರೂ ಹೇಳ್ತಾರೆ. ನೀವು ಅಳ್ತೀರಿ. ಅವರ ಸಮಸ್ಯೆ ಜೊತೆಗೆ ಇದೀಗ ಆ ಹುಡುಗ ನಿಮ್ಮನ್ನೂ ಸಮಾಧಾನ ಮಾಡ್ಬೇಕು.
ಯಾವಾಗಲೂ ಅವರನ್ನು ಎನ್‌ಕರೇಜ್ ಮಾಡಿ. ನೀವೇ ಅವರ ಬಿಗ್ಗೆಸ್ಟ್ ಚೀರ್ ಲೀಡರ್. ಎಮೋಷನಲ್ ಹಾಗೂ ಫಿಸಿಕಲ್ ಆಗಿ ಸದಾ ಸಪೋರ್ಟೀವ್ ಆಗಿರಿ. ಅವರ ಗೋಲ್‌ಗೆ ಅಡ್ಡ ಬರಬೇಡಿ. ನಾಳೆ ಅವರಿಗೆ ಇಂಟರ್ವ್ಯೂ ಇದೆ ಅಂದ್ರೆ ಮರುದಿನ ಬೆಳಗ್ಗೆ ಸಣ್ಣ ಕಿರಿಕ್ ಕೂಡ ಆಗದಂತೆ ಅವರನ್ನು ಆಫೀಸ್‌ಗೆ ಕಳುಹಿಸಿ. ಅವರಲ್ಲಿ ಪಾಸಿಟಿವಿಟಿ ತುಂಬಿ.
ಅತಿಯಾದ ಪ್ರೀತಿ ಬೇಡ, ಬಟ್ ಪ್ರೀತಿ ಮಾಡಿ. ದಿನವೂ ಹತ್ತು ಹದಿನೈದು ಟೆಕ್ಟ್ಸ್ ಮಾಡ್ಬೇಕು ಅಂತಿಲ್ಲ. ಬಟ್ ಒಂದು ಮೆಸೇಜ್ ಮಾಡಿ ಬೇಗ ಮನೆಗೆ ಬನ್ನಿ i miss you ಎಂದು ಹೇಳಿದ್ರೂ ಸಾಕು.
ಯಾವಾಗಲೂ ಅವರಿಗೆ ಅಂಟಿಕೊಂಡೇ ಇರಬೇಡಿ. ನೀವು ಅವರಿಗೋಸ್ಕರ ಇದ್ದೀರಿ ಎಂದು ಅವರಿಗೆ ಗೊತ್ತು. ಅದನ್ನು ಪ್ರೂವ್ ಮಾಡೋಕೆ ಸದಾ ಅವರ ಹಿಂದೆ ಮುಂದೆ ಸುತ್ತಬೇಕು ಅಂತಿಲ್ಲ. ನಿಮಗೂ ಸಮಯ ಕೊಟ್ಟುಕೊಳ್ಳಿ. ಅವರಿಲ್ಲದೆಯೂ ಎಂಜಾಯ್ ಮಾಡಿ. ಅವರಿಗೂ ಮಾಡಲು ಬಿಡಿ. ಒಂದೆರಡು ದಿನ ಅವರಿಗೆ ಮದುವೆ ಆಗಿದೆ ಅಥವಾ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ಮರೆತು ಓಡಾಡಿದ್ರೆ ಓಡಾಡ್ಲಿ ಬಿಡಿ. ನಿಮಗೆ ಅವರ ಮೇಲೆ ನಂಬಿಕೆ ಇದ್ರಾಯ್ತು ವರಿ ಮಾಡೋದು ಏನೂ ಇಲ್ಲ.
compromise is the key ಇದನ್ನು ಮಾತ್ರ ಮರೀಬೇಡಿ. ಯಾವ ರಿಲೇಷನ್‌ಶಿಪ್ ನಿನ್ನ ರೀತಿ ನೀರಿರು, ನನ್ನ ರೀತಿ ನಾನಿರ್ತೀನಿ ಅಂದ್ರೆ ಆಗೋದಿಲ್ಲ. ಇಬ್ಬರೂ ಒಂದೇ ಜೀವನ ಶೇರ್ ಮಾಡ್ತೀರಿ ಅಂತಾದ್ರೆ ಹೊಂದಾಣಿಕೆ ಇರಲೇಬೇಕು. ಇಲ್ಲ ಬೆಡ್‌ನ ಯಾವ ಸೈಡ್ ಯಾರು ಮಲಗಬೇಕು ಅನ್ನೋ ವಿಷಯಕ್ಕೂ ಜಗಳಗಳು ಆಗುತ್ತವೆ.