ನನ್ನ ದಾರಿ ರಹದಾರಿ, ಕೇರ್‌ ಮಾಡೋ ಮಾತೆ ಇಲ್ಲ: ನಾಯಿಮರಿಯ ಕ್ಯೂಟ್‌ ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಯಿಮರಿಯ ವಿಚಿತ್ರ ಚೇಷ್ಟೆಗಳು ನಗುತರಿಸದೇ ಇರಲಾರವು. ಎದೆಷ್ಟೂ ನೋಡಿದ್ರೂ ನೋಡಬೇಕೆನಿಸುವ..ಮುದ್ದು-ಪೆದ್ದು ಆಟಗಳು ಮನಸೂರೆಗೊಳಿಸುತ್ತವೆ. ಈ ವೈರಲಾಗಿರುವ ವಿಡಿಯೋದಲ್ಲಿ ಕೂಡ ಒಂದು ಪುಟ್ಟ ನಾಯಿಮರಿಯ ಕ್ಯೂಟ್‌ ಕ್ಯೂಟ್‌ ನಡವಳಿಕೆ ಆಶ್ಚರ್ಯಕಿತವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಹೆಕಿನ್ ಗುಡ್ ಡಾಗ್ಸ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾಯಿಮರಿಯೊಂದು ಉದ್ದವಾದ ಕೋಲು ಹಿಡಿದು ಬಂದವರಿಗೆಲ್ಲ ದಾರಿ ಬಿಡದೆ ಸಾಗುತ್ತಿರುವ ದೃಶ್ಯ ಕಾಣಬಹುದು. ಸಾಮಾನ್ಯವಾಗಿ ಮಾನವನ ಸಂಚಾರದಲ್ಲಿ ಶ್ವಾನಗಳ ಕುಚೇಷ್ಟೆ ತೀರಾ ಕಡಿಮೆ.

ದಾರಿಗಾಗಿ ಈ ಪುಟ್ಟ ನಾಯಿಮರಿಯ ಸರ್ಕಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ. ನಾಯಿಮರಿಯ ಪ್ರಯತ್ನವನ್ನು ಶ್ಲಾಘಿಸಿ ಸಾವಿರಾರು ಮಂದಿ ಟ್ವೀಟ್ ಮಾಡಿ ರೀಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!