Sunday, October 2, 2022

Latest Posts

ಕೊರೊನಾ ವರದಿ: ದೇಶದಲ್ಲಿ 5,221 ಹೊಸ ಪ್ರಕರಣಗಳು ದಾಖಲು, 15ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಕಳೆದ 24ಗಂಟೆಯಲ್ಲಿ 5,221 ಹೊಸ ಕರೋನಾ ಪ್ರಕರಣಗಳು ದಾಖಲಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.  ನಿನ್ನೆ 5,975 ಜನರು ಕರೋನಾದಿಂದ ಚೇತರಿಸಿಕೊಂಡಿದ್ದು ಒಂದೇ ದಿನದಲ್ಲಿ 15ಮಂದಿ ಸಾವೀಗೀಡಾಗಿದ್ದಾರೆ. ಇದರಂತೆ ಸಾವಿನ ಸಂಖ್ಯೆ 5,28,165 ಕ್ಕೆ ತಲುಪಿದೆ. ಪ್ರಸ್ತುತ, 47,176 ಜನರು ಆಸ್ಪತ್ರೆಗಳು ಮತ್ತು ಹೋಮ್ ಕ್ವಾರಂಟೈನ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೈನಂದಿನ ಸಕಾರಾತ್ಮಕತೆಯ ದರ ಶೇಕಡಾ2.82 ರಷ್ಟಿದೆ. ದೇಶದಲ್ಲಿ ಇದುವರೆಗೆ 215.26 ಕೋಟಿ ಲಸಿಕೆ ನೀಡಲಾಗಿದೆ.

ಎರಡನೇ ಡೋಸ್ 94.53 ಕೋಟಿ ಮತ್ತು ಬೂಸ್ಟರ್ ಡೋಸ್ 18.34 ಕೋಟಿ ನೀಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ 98.71 ಪ್ರತಿಶತ. ದೇಶದಲ್ಲಿ ಇದುವರೆಗೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,39,25,239 ಕ್ಕೆ ತಲುಪಿದೆ.

ದೇಶದಲ್ಲಿ ಇದುವರೆಗೆ ಒಟ್ಟು 88.95 ಕೋಟಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!