ಹೊಸದಿಗಂತ ವರದಿ, ಮಳವಳ್ಳಿ:
ನಂದಿಪುರ ಗ್ರಾಮದ ಬಳಿ ಕಾಡು ಹಂದಿ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಪರಿಣಾಮ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಳಗೆ ಬಿದ್ದು ತಲೆಗೆ ತೀರ್ವ ಪೆಟ್ಟಾಗಿ ಭವ್ಯ( 26) ಮೃತಪಟ್ಟಿರುತ್ತಾರೆ.
ಸಮೀಪದ ನಂದಿಪುರ ಗ್ರಾಮದ ಸಿದ್ದರಾಜು ತನ್ನ ಹೆಂಡತಿ ಭವ್ಯ ಹಾಗೂ ತಮ್ಮ ಮಗುವಿನೊಂದಿಗೆ ಮಂಗಳವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಪಿತೃ ಪಕ್ಷದ ಊಟ ಮುಗಿಸಿ ತಮ್ಮ ಸ್ವಗ್ರಾಮ ನಂದಿಪುರಕ್ಕೆ ಹೋಗುವಾಗ ನಂದಿಪುರ ಹಾಗೂ ಕೆಂಪಯ್ಯನ ದೊಡ್ಡಿ ಮಧ್ಯೆ ರಸ್ತೆಯಲ್ಲಿ ಕಾಡು ಹಂದಿ ಅಡ್ಡ ಬಂದು ಪರಿಣಾಮ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಕಸ್ಮಿಕವಾಗಿ ಕೆಳಗೆ ಬಿದ್ದ ಮೂವರು ಸಿದ್ದರಾಜು ಹಾಗೂ ಲಕ್ಷ್ಮಿ ಗೌಡ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಿದ್ದರಾಜು ರವರ ಪತ್ನಿ ಭವ್ಯ ಅವರ ತಲೆಗೆ ತೀರ್ವ ಪೆಟ್ಟಾಗಿ ತಕ್ಷಣ ಅವರನ್ನು ಮಳವಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದ ಮಧ್ಯೆ ಮೃತಪಟ್ಟಿರುತ್ತಾರೆ.
ಬುಧವಾರ ಬೆಳಗ್ಗೆ ಮಳವಳ್ಳಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವವನ್ನು ನೀಡಲಾಯಿತು.
ಹಲಗೂರು ಪೋಲಿಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಿ. ಮಹೇಂದ್ರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.