ಹೊಸದಿಗಂತ ವರದಿ ಮಂಗಳೂರು:
ಮನೆಯ ಹೊರಗೆ ಇಟ್ಟ ಗ್ಯಾಸ್ ಸಿಲಿಂಡರುಗಳನ್ನು ಕಳವು ಮಾಡುವ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದ್ದು, ಗ್ರಾಮೀಣ ಭಾಗದ ಜನರಿಗೆ ಆತಂಕ ಶುರುವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯವಿಟ್ಲದ ಅನಂತಾಡಿ ಭಾಗದಲ್ಲಿ ವಿವಿಧ ಮನೆಯಿಂದ ಸುಮಾರು 10 ಸಿಲಿಂಡರ್ ಕಳವು ಮಾಡಲಾಗಿದೆ. ಕೇಪು ಗ್ರಾಮದ ನೀರ್ಕಜೆ ಭಾಗದಲ್ಲಿ ಸುಮಾರು ಸಿಲಿಂಡರ್ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಗ್ಯಾಸ್ ಸಿಲಿಂಡರ್ ಕಳೆದುಕೊಂಡ ಮನೆ ಮಂದಿ ಕಂಗಾಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಲೇರುವ ಚಿಂತನೆ ನಡೆಸಿದ್ದಾರೆ. ಪೊಲೀಸ್ ವ್ಯವಸ್ಥೆ ರಾತ್ರಿ ಸಮಯ ಸರಿಯಾಗಿ ಬೀಟ್ ಬರದೇ ಇರುವುದು ಕಳ್ಳರಿಗೆ ವರದಾನವಾಗಿದೆ.