Tuesday, August 16, 2022

Latest Posts

ಚಲಿಸುತ್ತ ಇದ್ದ ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಚಲಿಸುತ್ತ ಇದ್ದ ಮೆಟ್ರೋ ರೈಲಿನ ಮುಂದೆಮಹಿಳೆಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಜೋರ್‌ಭಾಗ್‌ ನಿಲ್ದಾಣದ ಹಳದಿ ಮಾರ್ಗದಲ್ಲಿ ಈ ಘಟನೆ ನಡೆದಿದೆ.
ಮೆಟ್ರೋ ರೈಲು ಹುಡಾ ಸಿಟಿ ಸೆಂಟರ್‌ ಕಡೆಗೆ ಹೊರಟಿತ್ತು. ಈ ವೇಳೆ ಮಹಿಳೆ ಪ್ಲಾಟ್‌ಫಾರ್ಮ್‌ನಿಂದ ಜಿಗಿದಿದ್ದಾಳೆ. ಚಲಿಸ್ತಾ ಇದ್ದ ರೈಲಿಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಂಬ್ಯುಲೆನ್ಸ್‌ ಮೂಲಕ ಸಪ್ಧರ್‌ಗಂಜ್‌ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಅಷ್ಟರಲ್ಲಾಗ್ಲೇ ಆಕೆ ಮೃತಪಟ್ಟಿದ್ದಳು.
ಮಹಿಳೆ ಆತ್ಮಹತ್ಯೆಗೆ ಮುಂದಾಗಲು ಕಾರಣ ಏನು ಅನ್ನೋದು ಪತ್ತೆಯಾಗಿಲ್ಲ. ಸ್ಥಳದಲ್ಲಿ ಡೆತ್‌ ನೋಟ್‌ ಕೂಡ ಸಿಕ್ಕಿಲ್ಲ. ಸದ್ಯ ಆಕೆಯ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss