ಹೊಸದಿಗಂತ ವರದಿ,ಮೈಸೂರು:
ಮಗಳ ಅನಾರೋಗ್ಯದಿಂದ ಖಿನ್ನತೆಗೊಳಗಾಗಿ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಯ ಬಾತ್ ರೂಮ್‌ನಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ.
ನಗರದ ಹೂಟಗಳ್ಳಿ ನಿವಾಸಿಯಾದ ಯಾಸ್ಮಿನ್ (30) ಆತ್ಮಹತ್ಯೆ ಮಾಡಿಕೊಂಡಾಕೆ.
ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ತನ್ನ 7 ವರ್ಷದ ಪುತ್ರಿಯನ್ನು ಅನಾರೋಗ್ಯದ ಕಾರಣ ಚಿಕಿತ್ಸೆಗೆ ದಾಖಲಿಸಿದ್ದ ಯಾಸ್ಮಿನ್,
ವೈದ್ಯರು ಬಾಲಕಿಯನ್ನ ತಪಾಸಣೆ ಮಾಡಿ ಹೋಗುತ್ತಿದಂತೆ ಚಿಕ್ಕ ಬಾಲಕಿ ನಿದ್ರೆಗೆ ಜಾರಿದ್ದಾಳೆ. ನಂತರ ಯಾಸ್ಮಿನ್ ಆಸ್ಪತ್ರೆಯ ಬಾತ್ ರೂಮ್‌ಗೆ ಹೋಗಿ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ತಕ್ಷಣ ಕೆಆರ್ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.