Tuesday, February 27, 2024

ಮನೆ ಕ್ಲೀನ್ ಮಾಡುತ್ತಿದ್ದ ವೇಳೆ 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರಿನ(Bengaluru) ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯಲ್ಲಿ 31 ವರ್ಷದ ಮಹಿಳೆಯೋರ್ವರು (Woman) ಅಪಾರ್ಟ್ಮೆಂಟ್​ನ 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಖುಷ್ಬೂ ಅಶೀಷ್ ತ್ರಿವೇದಿ ಎನ್ನುವ ಮಹಿಳೆ ಮನೆ ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಜರಾತ್ ಮೂಲದ ಖುಷ್ಬೂ ಹಾಗೂ ಆಶೀಶ್ ಇತ್ತೀಚೆಗಷ್ಟೆ ಮದುವೆಯಾಗಿದ್ದು, ದೊಡ್ಡಬನಹಳ್ಳಿಯ ವಿಂಧ್ಯಗಿರಿ ಅಪಾರ್ಟಮೆಂಟ್​ನ 5ನೇ ಮಹಡಿಯಲ್ಲಿ ವಾಸವಾಗಿದ್ದರು. ಆದ್ರೆ, ಇಂದು ಪ್ಲಾಟ್ ಮುಂಭಾಗ ಶೂ ಬಾಕ್ಸ್ ಕ್ಲೀನ್ ಮಾಡುತ್ತಿದ್ದ ವೇಳೆ ಖುಷ್ಬೂ ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದರಿಂದ ಗಂಭೀರ ಗಾಯವಾಗಿ ಗಾಯಗೊಂಡಿದ್ದ ಖುಷ್ಬೂ ಅವರನ್ನು ಕೂಡಲೇ ಅಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!