ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆ ಮೇಲೆ ಕ್ಯಾಬ್ ಚಾಲಕನಿಂದ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರ ಮೇಲೆ ಉಬರ್ ಕ್ಯಾಬ್ ಚಾಲಕ ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿದೆ.

ಬೆಳ್ಳಂದೂರು ಬಳಿಯ ಬೋಗನಹಳ್ಳಿಯ ಬಳಿ ಮಹಿಳೆ ತನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಬಂದ ನಂತರ ಮಹಿಳೆ ಹಾಗೂ ಮಗ ಕ್ಯಾಬ್‌ನಲ್ಲಿ ಕುಳಿತರು. ನಂತರ ಒಟಿಪಿ ಮ್ಯಾಚ್ ಆಗದಾಗ ಬೇರೆ ಕ್ಯಾಬ್‌ನಲ್ಲಿ ಇರುವ ವಿಷಯ ಅರಿವಿಗೆ ಬಂದು ತಕ್ಷಣವೇ ಇಳಿದಿದ್ದಾರೆ.

ಕ್ಯಾಬ್ ಚಾಲಕ ಮುಂದೆ ಹೋಗುವಾಗ ಮಹಿಳೆ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ಹೆಚ್ಚಾಗಿದೆ. ಮಾತಿಗೆ ಮಾತು ಬೆಳೆದು ಕ್ಯಾಬ್ ಚಾಲಕ ಕ್ಯಾಬ್ ಇಳಿದು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ಆಗಮಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!