ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಭಿನ್ನ ರುಚಿಯ ಅಡುಗೆ ಸವಿಯಲು ಬಯಸುವವರು ಒಮ್ಮೆ ಮಾಡಿ ಸವಿದು ನೋಡಿ ಆಂಧ್ರ ಶೈಲಿಯ ಪೆಸರಟ್ಟು ದೋಸೆ
ಬೇಕಾಗುವ ಸಾಮಗ್ರಿಗಳು:
* ಹೆಸರು ಕಾಳು
* ಅಕ್ಕಿ
* ಈರುಳ್ಳಿ
* ಶುಂಠಿ
* ಜೀರಿಗೆ
* ಹಸಿಮೆಣಸಿನ ಕಾಯಿ
* ಉಪ್ಪು
ಮಾಡುವ ವಿಧಾನ:
* ಮೊದಲಿಗೆ ಹೆಸರುಕಾಳು ಮತ್ತು ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆಸಿಡಿ.
* ನಂತರ ಅದನ್ನು ದೋಸೆ ಮಾಡುವ ಹದಕ್ಕೆ ರುಬ್ಬಿಕೊಳ್ಳಿ. ಅರ್ಧ ರುಬ್ಬಿಕೊಂಡ ನಂತರ ಅದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಉಪ್ಪನ್ನು ಸೇರಿಸಿ.
* ಈ ಹಿಟ್ಟಿಗೆ ಜೀರಿಗೆ ಕಾಳುಗಳನ್ನು ಸೇರಿಸಿ ಕಲಸಿ.
* ಈಗ ತವಾ ಮೇಲೆ ಹಿಟ್ಟನ್ನು ದುಂಡಗೆ ಹಾಕಿ.
* ದೋಸೆ ಸ್ವಲ್ಪ ಬೆಂದ ನಂತರ ಕತ್ತರಿಸಿದ ಈರುಳ್ಳಿಯನ್ನು ಅದರ ಮೇಲೆ ಉದುರಿಸಿ. ದೋಸೆಯನ್ನು ಬೇಯಿಸಿ. ಈಗ ಪೆಸರಟ್ಟು ದೋಸೆಯನ್ನು ತೆಂಗಿನ ಚಟ್ನಿಯೊಂದಿಗೆ ಸವಿಯಿರಿ.