ನಾಗವಲ್ಲಿ ವೇಷ ತೊಟ್ಟು ಮೆಟ್ರೋ ಹತ್ತಿದ ಮಹಿಳೆ: ಆಕೆ ಕಂಡು ಹೆದರಿ ಸೀಟ್‌ ಬಿಟ್ಟ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟ್ರೋದಲ್ಲಿ ಮಹಿಳೆಯೊಬ್ಬರು ನಾಗವಲ್ಲಿ ವೇಷ ತೊಟ್ಟುಪ್ರಯಾಣಿಕರನ್ನು ಬೆದರಿಸುತ್ತಿರುವ ದೃಶ್ಯಗಳ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೇಷ ತೊಟ್ಟಿದ್ದ ಮಹಿಳೆ ನೋಯ್ಡಾ ಮೆಟ್ರೋ (Noida Metro) ಹತ್ತಿ, ಪ್ರಯಾಣಿಕರನ್ನು ಬೆದರಿಸುವಂತೆ ನಟಿಸಿದ್ದಾರೆ. ಈಕೆಯನ್ನು ನೋಡಿ ಮೆಟ್ರೋದಲ್ಲಿ ನಿಂತಿದ್ದವರನ್ನಷ್ಟೇ ಅಲ್ಲ, ಸೀಟ್‌ನಲ್ಲಿ ಕುಳಿತಿದ್ದವರ ಹೆದರಿದ್ದಾರೆ.

ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ತನ್ನಷ್ಟಕ್ಕೆ ತಾನು ಮೊಬೈಲ್‌ ನೋಡುತ್ತಿದ್ದ ಯುವಕನ ಬಳಿಗೆ ಮಹಿಳೆ ಹೋಗಿ ಬೆನ್ನು ತಟ್ಟಿದ್ದಾರೆ. ಇದರಿಂದ ಹೆದರಿ ಆತ ಸೀಟ್‌ನಿಂದ ಎದ್ದು ಹೋಗಿದ್ದಾನೆ. ನಂತರ ಆಕೆ ಆ ಸೀಟ್‌ನಲ್ಲಿ ಕುಳಿತುಕೊಂಡ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

ನೆಟ್‌ಫ್ಲಿಕ್ಸ್ ಶೋ ‘ಮನಿ ಹೀಸ್ಟ್’ನಿಂದ ಪ್ರೇರಿತ ಪಾತ್ರದಂತೆ ವೇಶ ಧರಿಸಿದ್ದ ಮತ್ತೊಬ್ಬ ವ್ಯಕ್ತಿ ಮೆಟ್ರೋದಲ್ಲಿ ಕಾಣಿಸಿಕೊಳ್ಳುತ್ತಾನೆ. ವೀಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅನೇಕರು ಮಹಿಳೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀಡಿಯೋ ವೈರಲ್ ಆದ ಬಳಿಕ ಘಟನೆಯನ್ನು ಗಮನಿಸಿ ಅನೇಕರು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!