100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪಠಾಣ್‌ʼ ಸಿನಿಮಾ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್‌ ಖಾನ್‌ ನಟನೆಯ ಬಹುನೀರಿಕ್ಷಿತ ʼಪಠಾಣ್‌ʼ ಸಿನಿಮಾ (Pathaan Movie) ಬುಧವಾರ ತೆರೆ ಕಾಣಲಿದೆ. ಭಾರೀ ಪ್ರಮಾಣದಲ್ಲಿ ಸಿನಿಮಾ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ ಆಗಿದೆ.

ವರದಿ ಪ್ರಕಾರ ಪಠಾಣ್‌ ಮೊದಲ ದಿನದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ ಬರೋಬ್ಬರಿ 27.14 ಕೋಟಿ ರೂ.ಗಳಿಷ್ಟಿದೆ. ಹಾಗೆಯೇ ಎರಡನೇ ದಿನದ 15.71 ಕೋಟಿ ರೂ. ಮೌಲ್ಯದ ಟಿಕೆಟ್‌, ಮೂರನೇ ದಿನದ 15.81 ಕೋಟಿ ರೂ. ಮೌಲ್ಯದ ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಹಿಂದಿ ಭಾಷೆಯೊಂದರಲ್ಲೇ ಮೊದಲನೇ ದಿನದ 4 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಬುಕ್ಕಿಂಗ್‌ ಆಗಿವೆ.ಮುಂಗಡ ಬುಕ್ಕಿಂಗ್‌ನಿಂದಲೇ ಸಿನಿಮಾ ಈಗಾಗಲೇ 58 ಕೋಟಿ ರೂ. ಗಳಿಸಿದೆ.

ಈ ಸಿನಿಮಾ ಒಟ್ಟು 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ತೆರೆ ಕಾಣಲಿದೆ. ಈವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟೊಂದು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ಪಠಾಣ್‌ ಸಿನಿಮಾ ಇಂತದ್ದೊಂದು ಹೊಸ ದಾಖಲೆಯನ್ನು ಬರೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!