ಹೊಸದಿಗಂತ ವರದಿ,ಹಂದಿಗುಂದ (ಬೆಳಗಾವಿ):
ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಹರಿದಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಬಟ್ಟೆ ತೊಳೆಯಲು ಹೋಗಿ ನಾಪತ್ತೆಯಾದ ಘಟನೆಯೊಂದು ವರದಿಯಾಗಿತ್ತು.
ಸುಲ್ತಾನಪುರ ಗ್ರಾಮದ ಲಕ್ಷ್ಮೀ ಮಹಾದೇವ ಗೋಕಾಕ (೨೩) ಆ.೬ರಂದು ಮುಂಜಾನೆ ೮:೩೦ಕ್ಕೆ ಬಟ್ಟೆ ತೊಳೆಯಲು ಕಾಲುವೆಗೆ ಹೋದ ಸಂದರ್ಭದಲ್ಲಿ ಫೋನ್ ಆಫೀಸ್ ಹತ್ತಿರ ಕಾಲುವೆಯೊಳಗೆ ಕಾಲು ಜಾರಿ ಬಿದ್ದಿರಬಹುದೆಂದು ಸಂದೇಹ ಕುಟುಂಬ ಹಾಗೂ ಗ್ರಾಮಸ್ಥರಲ್ಲಿತ್ತು.
ಮೃತ ಶವಕ್ಕಾಗಿ ಶೋಧ ಕಾರ್ಯ ನಡೆದಿದ್ದು ಸೋಮವಾರ ಮಧ್ಯಾಹ್ನ ೩ಗಂಟೆಗೆ ಕಾಲುವೆಯಲ್ಲಿ ಬಟ್ಟೆ ತೊಳೆಯುವ ಸ್ಥಳದ ದೂರಳತೆಯಲ್ಲಿ ಮಹಿಳೆಯ ಶವವು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸ್ ಠಾಣೆಯ ಹೆಚ್ಚುವರಿ ಪಿಎಸ್‌ಐ ಚಾಂದಬಿ ಗಂಗಾವತಿ ಹಾಗೂ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಗ್ರಾಮಸ್ಥರು ಶೋಧ ಕಾರ್ಯ ನಡೆಸಿದ್ದರು.
ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ಮಹಿಳೆಯು ಗಂಡ, ಮೂರು ವರ್ಷದ ಗಂಡು ಮಗು, ಒಂದು ವರ್ಷದ ಹೆಣ್ಣು ಮಗುವಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.