ಬರೋಬ್ಬರಿ 133,000 ಡಾಲರ್ ವೆಚ್ಚದಲ್ಲಿ ಅಮೆರಿಕದಿಂದ ಚೆನ್ನೈಗೆ ಮಹಿಳೆಯ ಏರ್‌ಲಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೂಲದ ಮಹಿಳೆಯೋರ್ವರನ್ನು ತುರ್ತು ಚಿಕಿತ್ಸೆಗಾಗಿ ಅಮೆರಿಕದ ಫೋರ್ಟ್‌ಲ್ಯಾಂಡ್‌ನಿಂದ ಬರೋಬ್ಬರಿ 133,000 ಡಾಲರ್ (1 ಕೋಟಿ ರೂ.+) ವೆಚ್ಚಮಾಡಿ ಚೆನ್ನೈಗೆ ಏರ್‌ಲಿಫ್ಟ್ ಮಾಡಲಾದ ಘಟನೆ ನಡೆದಿದೆ.
67 ವಷೇ ವಯಸ್ಸಿನ ಈ ಮಹಿಳೆ ಕಳೆದ ಕೆಲವು ವರ್ಷಗಳಿಂದ ಮಕ್ಕಳೊಂದಿಗೆ ಒರೆಗಾನ್‌ನಲ್ಲಿ ವಾಸವಾಗಿದ್ದಾರೆ. ಈಕೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಪೋರ್ಟ್‌ಲ್ಯಾಂಡ್‌ನಿಂದ ಏರ್ ಆಂಬುಲೆನ್ಸ್ ಮೂಲಕ ಐಸ್‌ಲ್ಯಾಂಡ್, ಟರ್ಕಿ ಮಾರ್ಗವಾಗಿ ಚೆನ್ನೈಗೆ ಏರ್ ಲಿಫ್ಟ್ ಮಾಡಲಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆ ವೈದ್ಯರ ನಿಗಾದಲ್ಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!