ಗಡಿಯಲ್ಲಿ ಮತ್ತೆ ಬಾಲಬಿಚ್ಚಿದ ಡ್ರ್ಯಾಗನ್: ಡೋಕ್ಲಾಮ್ ಬಳಿ ಸುಸಜ್ಜಿತ ಹಳ್ಳಿ ನಿರ್ಮಾಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿ ಪ್ರದೇಶದಲ್ಲಿ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಕೆಣಕುವ ನೆರೆಯ ಚೀನಾ ಮತ್ತೆ ಕ್ಯಾತೆ ತೆಗೆದಿದೆ.
2017ರಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ ಸಂಘರ್ಷ ನಡೆದ ಡೋ ಕ್ಲಾಮ್ ಪ್ರದೇಶದಿಂದ ಸುಮಾರು 9 ಕಿ.ಮೀ ದೂರದಲ್ಲಿ ಚೀನಾ ರಸ್ತೆ ಮೊದಲಾದ ಮೂಲ ಸೌಕರ್ಯಗಳುಳ್ಳ ಗ್ರಾಮವನ್ನು ನಿರ್ಮಾಣ ಮಾಡಿದೆ ಎಂಬುದು ಉಪಗ್ರಹ ಆಧಾರಿತ ಚಿತ್ರಗಳ ಮೂಲಕ ಬೆಳಕಿಗೆ ಬಂದಿದೆ.

ಬೀಜಿಂಗ್ ಈ ಗ್ರಾಮವನ್ನು ಪಾಂಗ್ಡಾ ಎಂದು ನಾಮಕರಣ ಮಾಡಿದ್ದು, ಇದು ಭೂತಾನ್‌ಗೆ ಸೇರಿದ ಭೂಪ್ರದೇಶದಲ್ಲಿದೆ ಎನ್ನಲಾಗಿದೆ. ಭೂತಾನ್ ಗಡಿಯ ೧೦ ಕಿ.ಮೀ ಒಳಗಡೆ ಅಮೊ ಚು ನದಿಯ ತೀರದಲ್ಲಿ ಈ ಗ್ರಾಮವಿದೆ. ಪಾಂಗ್ಡಾದಲ್ಲಿ ಸರ್ವ ಋತು ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದ್ದು ಉಪಗ್ರಹದ ಚಿತ್ರದಲ್ಲಿ ಕಂಡುಬಂದಿದೆ.

ಚೀನಾ ಪಡೆಗಳು ನೇರವಾಗಿ ಡೋಕ್ಲಾಮ್ ಪ್ರಸ್ಥಭೂಮಿಯನ್ನು ಪ್ರವೇಶಿಸಲು ಅಮೊ ಚು ನದಿಯುದ್ದಕ್ಕೂ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವುದು ನೆರವಾಗುತ್ತದೆ. ಈಶಾನ್ಯ ಭಾರತದ ರಾಜ್ಯಗಳನ್ನು ಭಾರತದ ಇತರೆ ಭಾಗಗಳಿಗೆ ಜೋಡಿಸುವ ಸಿಲಿಗುರಿ ಕಾರಿಡಾರ್‌ಗೆ ನೇರ ವಾಗಿ ಇದನ್ನು ನಿರ್ಮಾಣ ಮಾಡಲಾಗಿದೆ.

2017ರಲ್ಲಿ ಡೋಕ್ಲಾಮ್‌ನಲ್ಲಿರುವ ಜಂಪೇರಿ ಪರ್ವತ ಶ್ರೇಣಿಗೆ ಚೀನಾದ ಕಾರ್ಮಿಕರು ಪ್ರವೇಶಿಸದಂತೇ ಭಾರತೀಯ ಯೋಧರು ತಡೆದಿದ್ದರು. ಆದರೆ ಹಳೆ ಚಾಳಿ ಬಿಡದ ಚೀನಾ ಪರ್ಯಾಯ ಮಾರ್ಗದ ಮೂಲಕ ಪರ್ವತ ಶ್ರೇಣಿಗೆ ಸಮೀಪಿಸುವ ಪ್ರಯತ್ನ ಮಾಡುತ್ತಿರುವುದು ಚಿಂತೆಗೀಡು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!