ಗೂಗಲ್‌ ಮುಖ್ಯಸ್ಥ ಸುಂದರ್‌ಪಿಚ್ಚೈ ಭೇಟಿಮಾಡಿದ ತಮಿಳುನಾಡಿನ ಯುವ ಉದ್ಯಮಿ- ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮಿಳುನಾಡು ಮೂಲದ ಯುವ ಉದ್ಯಮಿಯೊಬ್ಬ ಗೂಗಲ್‌ ಮುಖ್ಯಸ್ಥ ಸುಂದರ್‌ಪಿಚ್ಚೈ ಅವರನ್ನು ಭೇಟಿ ಮಾಡಿದ್ದಾನೆ. ಅದ್ರಲ್ಲೇನು ವಿಶೇಷ ಅಂದ್ರಾ, ಈ ಯುವ ಉದ್ಯಮಿ ಕೃಷಿಕರಿಗೆ ಸಹಾಯಕವಾಗು ಅಗ್ರಿಟೆಕ್‌ ಅಪ್ಲಿಕೇಷನ್‌ ಒಂದರ ಮಾಲೀಕ, ತನ್ನದೇ ಆದ ಸಾಫ್ಟ್‌ವೇರ್‌ ನವೋದ್ದಿಮೆಯನ್ನೂ ಹೊಂದಿದ್ದಾನೆ. ಆತ ಆಲ್ಫಾಬೆಟ್‌ ಹಾಗು ಟೆಕ್‌ ದೈತ್ಯ ಗೂಗಲ್‌ ನ ಸಿಇಒ ಸುಂದರ್‌ಪಿಚ್ಚೈ ಅವರನ್ನು ಭೇಟಿ ಮಾಡಿದ್ದಾನೆ. ತಮಿಳುನಾಡಿನ ಈ ಯುವ ಉದ್ಯಮಿಯ ಹೆಸರು ಸೆಲ್ವ ಮುರಳಿ, ಹೇಳಿಕೊಳ್ಳುವಷ್ಟೇನೂ ವಯಸ್ಸಾಗಿಲ್ಲ, ಆದರೆ ಈಗಾಗಲೇ ಈತ ಕೃಷಿಕರಿಗೆ ಉಪಯುಕ್ತವಾಗುವ ʼಅಗ್ರಿಶಕ್ತಿʼ ಎಂಬ ಅಪ್ಲಿಕೇಷನ್‌ ತಯಾರಿಸಿದ್ದಾರೆ. ಇದಲ್ಲದೇ ಕೃಷ್ಣಗಿರಿಜಿಲ್ಲೆಯಲ್ಲಿ ವಿಶುವಲ್‌ ಟೆಕ್ಮಾಲಜೀಸ್‌ ಎಂಬ ಸಾಫ್ಟ್‌ ವೇರ್‌ ಕಂಪನಿಯನ್ನೂ ಹೊಂದಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಗೂಗಲ್‌ ನ Appscale ಅಕಾಡೆಮಿಯ ಸಹಯೋಗದೊಂದಿಗೆ ಭಾರತದ ಡೆವಲಪರ್‌ಗಳಿಗೆ ಉತ್ತೇಜನ ನೀಡುವ ಉಪಕ್ರಮದ ಭಾಗವಾಗಿ ಗೂಗಲ್‌ ಭಾರತದ ಆಯ್ದ 100 ಡೆವಲಪರ್‌ ಗಳಿಗೆ 6 ತಿಂಗಳ ಟ್ರೇನಿಂಗ್‌ ಹಮ್ಮಿಕೊಂಡಿತ್ತು. ಆ ಆಯ್ದ ಡೆವಲಪರ್‌ ಗಳಲ್ಲಿ ಸೆಲ್ವ ಮುರಳಿ ಕೂಡ ಒಬ್ಬರು. ಆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಿಇಒ ಸುಂದರ್‌ ಪಿಚ್ಚೈ ಅವರನ್ನು ಭೇಟಿಮಾಡಲು ಸೆಲ್ವಮುರಳಿ ಆಯ್ಕೆಯಾಗಿದ್ದರು.

ಸೆಲ್ವ ಮುರಳಿಯವರ ʼಅಗ್ರಿಶಕ್ತಿʼ ಅಪ್ಲಿಕೇಷನ್‌ ಕೃಷಿ ಉತ್ಪನ್ನಗಳು, ವಿಮೆ, ಅಗತ್ಯ ಕೃಷಿ ಪೋಷಕಾಂಶಗಳು, ಮಾರುಕಟ್ಟೆ ಬೆಲೆ ಮತ್ತು ಕೃಷಿ ತರಬೇತಿ ಇತ್ಯಾದಿ ಮಾಹಿತಿಯನ್ನು ರೈತರಿಗೆ ಅತ್ಯಂತ ಸುಲಭವಾಗಿ ಒದಗಿಸುತ್ತದೆ. ಇದು ಗೂಗಲ್‌ ನ ತಮಿಳು ಭಾಷಾ ಫೀಚರ್‌ಅನ್ನು ಬಳಸಿಕೊಳ್ಳುತ್ತೆ, ರೈತರಿಗೆ ಸುಲಭವಾಗಲೆಂದು ತಮಿಳು ವಾಯ್ಸ್‌ ಫೀಚರ್‌ ಗಳನ್ನು ಈ ಅಪ್ಲಿಕೇಷನ್‌ ನಲ್ಲಿ ಬಳಸಿಕೊಂಡಿರುವುದಾಗಿ ಸೆಲ್ವ ಮುರಳಿ ಹೇಳಿದ್ದಾರೆ. ಪ್ರಸ್ತುತ ಗೂಗಲ್‌ನ ಸುಂದರ್‌ ಪಿಚ್ಚೈ ಅವರನ್ನು ಭೇಟಿ ಮಾಡಿ ಅವರೊಂದಿಗೆ ಒಂದು ಕ್ಯಾಶುವಲ್‌ ಮೀಟ್‌ ಮಾಡಿದ್ದಾರೆ ಯುವ ಉದ್ಯಮಿ ಸೆಲ್ವ ಮುರಳಿ. ಭಾರತದ ಡೆವಲಪರ್‌ ಗಳೀಗ ಗೂಗಲ್‌ ನ ಗಮನ ಸೆಳೆಯುತ್ತಿದ್ದಾರೆ ಎಂಬುದಂತೂ ಇದರಿಂದ ನಿಚ್ಚಳವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!