ಕೋವಿಡ್ ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ಹಾಕುವ ಲಸಿಕೆ ಪಡೆಯಬಹುದಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಇದೀಗ ಮೂಗಿನ ಮೂಲಕ ಹಾಕುವ ಲಸಿಕೆ ಬಂದಿದ್ದು, ಬೂಸ್ಟರ್ ಡೋಸ್ ಪಡೆದವರೂ ಈ ಲಸಿಕೆ ಹಾಕಿಸಿಕೊಳ್ಳಬಹುದಾ ಎನ್ನುವ ಪ್ರಶ್ನೆ ಎದುರಾಗಿದೆ.

ಇದಕ್ಕೆ ತಜ್ಞರು ಉತ್ತರಿಸಿದ್ದು, ಈಗಾಗಲೇ ಬೂಸ್ಟರ್ ಡೋಸ್ ಪಡೆದವರು ನೇಸಲ್ ಲಸಿಕೆ ಹಾಕಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಇದನ್ನು ಬೂಸ್ಟರ್ ಡೋಸ್ ತೆಗೆದುಕೊಂಡವರು ಪಡೆಯಬಹುದಾ ಎನ್ನುವ ಅನುಮಾನ ಹಲವರಿಗಿತ್ತು. ಇದೀಗ ಕೋವಿಡ್ ಕಾರ್ಯಪಡೆ ಮುಖ್ಯಸ್ಥರಾದ ಡಾ.ಎನ್.ಕೆ. ಅರೋರ ಮಾಹಿತಿ ನೀಡಿದ್ದು, ಬೂಸ್ಟರ್ ಪಡೆದಿದ್ದರೆ ಮತ್ತೆ ನೇಸಲ್ ಲಸಿಕೆ ಬೇಡ ಎಂದಿದ್ದಾರೆ.

ಸಾಕಷ್ಟು ಮಂದಿ ನೇಸಲ್ ಲಸಿಕೆಯನ್ನು ನಾಲ್ಕನೇ ಡೋಸ್ ರೀತಿ ಪಡೆಯುವ ಆಯ್ಕೆ ನಿರೀಕ್ಷಿಸಿದ್ದರು. ಆದರೆ ಮತ್ತೊಂದು ಡೋಸ್‌ಗೆ ದೇಹ ಪೂರಕವಾಗಿ ಸ್ಪಂದಿಸುವುದಿಲ್ಲ. ಲಸಿಕೆಯ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ. ಇದು ಆಗಬಾರದು ಎಂದಿದ್ದಾರೆ.

ಮೂಗಿನ ಮೂಲಕ ಪಡೆಯುವ ಕೋವಿಡ್ ಲಸಿಕೆ ಪರಿಣಾಮಕಾರಿಯಾಗಿದೆ. ಬೂಸ್ಟರ್ ಡೋಸ್ ಪಡೆಯದವರು ಇದನ್ನು ಪಡೆಯಬಹುದು. ಈ ಲಸಿಕೆ ನೇರವಾಗಿ ಉಸಿರಾಟ ವ್ಯವಸ್ಥೆಯನ್ನು ತಲುಪುತ್ತದೆ. ಮೂಗು ಮತ್ತು ಬಾಯಿಯಲ್ಲಿ ನಿರೋಧಕ ಶಕ್ತಿ ಉಂಟಾಗುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!