ಹೊಸ ದಿಗಂತ ವರದಿ, ಹಲಗೂರು:
ಸಮೀಪದ ನಿಟ್ಟೂರು ಗ್ರಾಮದ ಆನಂದ (33) ಎಂಬುವರು ಕುಡಿದ ಮತ್ತಿನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ಎದುರಿಸಲು ಹೋಗಿ ಸುಟ್ಟ ಬೆಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿರುವ ಘಟನೆ ಜರುಗಿದೆ.
ಹಲಗೂರು ಹೋಬಳಿಯ ನಿಟ್ಟೂರು ಗ್ರಾಮದ ಆನಂದ್ (33) ಬಿನ್ ಶಿವಣ್ಣ ಎಂಬುವವರು ಮೃತಪಟ್ಟ ದುರ್ದೈವಿ. ಮೃತ ಅಸಾಮಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಕಳೆದ ಎರಡು ದಿನದ ಹಿಂದೆ ಕುಡಿದ ಮತ್ತಿನಲ್ಲಿ ಮಧ್ಯ ಪಾನ ಮಾಡಲು ಹಣ ಕೊಡು ಎಂದು ಮನೆಯವರನ್ನು ಪೀಡಿಸುತ್ತಿದ್ದ. ಮನೆಯವರು ಕುಡಿ ಯಲು ಹಣ ಕೊಡದೆ ನಿರಾಕರಿಸಿದ ಕಾರಣದಿಂದಾಗಿ ಸೀಮೆ ಎಣ್ಣೆ ಸುರಿದು ಕೊಂಡು ಸಾಯುತ್ತೇನೆ ಎಂದು ಮನೆಯ ವರಿಗೆ ಎದುರಿಸಲು ಹೋಗಿ ಸೀಮೆ ಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿರುವ ಪರಿಣಾಮವಾಗಿ ದೇಹ ಪೂರ್ಣ ಸುಟ್ಟು ಹೋಗಿದ್ದು ಇಂತಹ ಸಂದರ್ಭ ತಕ್ಷಣ ಹಲಗೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿತ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಈ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.