Sunday, December 10, 2023

Latest Posts

ದಿನಭವಿಷ್ಯ| ಕೆಲ ವಿಚಾರಗಳಲ್ಲಿ ಗೊಂದಲ, ಆದ್ದರಿಂದ ಪ್ರಮುಖ ನಿರ್ಧಾರ ಮುಂದೂಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ನೀವು ಬಯಸಿದ ಮುಖ್ಯ ಕಾರ್ಯ ಇಂದು ಈಡೇರುವುದು. ಅಡ್ಡಿ ನಿವಾರಣೆ. ಬಾಕಿ ಉಳಿದಿದ್ದ ಕೌಟುಂಬಿಕ ಹೊಣೆಗಾರಿಕೆ ಮುಗಿಸಲು ಪ್ರಯತ್ನಿಸಿ.

ವೃಷಭ
ಇಂದು ಅತಿ ಭಾವುಕತೆ ಪ್ರದರ್ಶಿಸುವಿರಿ. ಅನಿಶ್ಚಿತ ವರ್ತನೆ ತೋರುವಿರಿ. ಕೆಲ ವಿಚಾರಗಳಲ್ಲಿ ಗೊಂದಲದ ಮನಸ್ಥಿತಿ. ಆದ್ದರಿಂದ ಪ್ರಮುಖ ನಿರ್ಧಾರ ಮುಂದೂಡಿ.

ಮಿಥುನ
ಆತ್ಮೀಯರ ಸಂಬಂಧ ಕಡಿದುಕೊಂಡಿದ್ದರೆ ಅವರೊಂದಿಗೆ ಬಾಂಧವ್ಯ ಮರುಸ್ಥಾಪಿಸಿ. ನಿಮ್ಮ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಿ. ಎಲ್ಲ ಸರಿಯಾಗುವುದು.

ಕಟಕ
ಇಂದು ನಿರಾಳ ದಿನ. ಕೌಟುಂಬಿಕ ಮತ್ತು ವೃತ್ತಿ ಸಮಸ್ಯೆ ನಿವಾರಣೆ. ಬೆನ್ನು – ಸಂಧಿ ನೋವು ಇದ್ದವರಿಗೆ ಅದರಿಂದ ಮುಕ್ತಿ. ಆರ್ಥಿಕ ಸುಧಾರಣೆ.

ಸಿಂಹ
ಕುಟುಂಬಸ್ಥರ ಸಮಸ್ಯೆ ನಿವಾರಿಸಲು ಆದ್ಯತೆ ಕೊಡಿ. ಅವರಿಗೆ ನಿಮ್ಮ ಮಾರ್ಗದರ್ಶನದ ಅಗತ್ಯ ಬೀಳುವುದು. ವೃತ್ತಿಯಲ್ಲಿ ನಿಮಗೆ ಅನುಕೂಲ ಬೆಳವಣಿಗೆ.

ಕನ್ಯಾ
ಹೆಚ್ಚು ದೃಢತೆಯಿಂದ ಕಾರ್ಯಾಚರಿಸುವಿರಿ. ಇದರಿಂದ ಅಸಾಧ್ಯ ಕೆಲಸವನ್ನೂ ಸಾಧಿಸುವಿರಿ. ಪ್ರೀತಿಪಾತ್ರರ ಜತೆ ಹೆಚ್ಚು ಹೊಂದಾಣಿಕೆ ಮತ್ತು ಸೌಹಾರ್ದ.

ತುಲಾ
ಪ್ರೀತಿಪಾತ್ರರ ಕುರಿತು ನಿಮ್ಮ ಭಾವನೆ ವ್ಯಕ್ತಪಡಿಸಲು ಸಕಾಲ. ಎಲ್ಲವೂ ಸುಗಮವಾಗಿ ಸಾಗುವುದು. ಭಿನ್ನಮತ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ.

ವೃಶ್ಚಿಕ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ಕೆಲವರ ವರ್ತನೆಗೆ ಅತಿರೇಕದ ಸ್ಪಂದನೆ ತೋರಬೇಕೆಂದಿಲ್ಲ.

ಧನು
ಸುಪ್ತಭಾವನೆ ಕೆದಕುವ ವ್ಯಕ್ತಿಗಳ ಜತೆ ಒಡನಾಟ. ಅವರೊಂದಿಗೆ ಆತ್ಮೀಯ ಕಾಲಕ್ಷೇಪ. ನಿಮ್ಮ ಉದ್ದೇಶ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ ಮುಖ್ಯ.

ಮಕರ
ನಿಮ್ಮ ಗುರಿ ಸಾಧನೆಗೆ ಸೂಕ್ತವಾದ ದಿನ. ಎಲ್ಲವೂ ಅನುಕೂಲಕರ. ಆತಂಕಕ್ಕೆ ಕಾರಣವಾಗಿದ್ದ ಪ್ರಸಂಗವು ಇತ್ಯರ್ಥ ಆಗುವುದು. ಆರ್ಥಿಕ ನೆರವು ಲಭ್ಯ.

ಕುಂಭ
ಅರೆಮನಸ್ಸಿನಿಂದ ಕೆಲಸ ಮಾಡಬೇಡಿ. ಯಾವುದೇ ಕೆಲಸ ವಾದರೂ ಪೂರ್ಣ ತೊಡಗಿಸಿಕೊಳ್ಳಿ. ಇಲ್ಲವಾದರೆ ಟೀಕೆ ಎದುರಿಸುವಿರಿ.

ಮೀನ
ಇತರರು ತಮ್ಮ ಸಮಸ್ಯೆಗೆ ನಿಮ್ಮಲ್ಲಿ ಪರಿಹಾರ ಕೋರಿಯಾರು. ನಿಮ್ಮಿಂದಾದ ನೆರವು ನೀಡಿ. ಅವರಿಗೆ ಮಾರ್ಗದರ್ಶನ ಮಾಡಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!