Sunday, June 4, 2023

Latest Posts

ನೀರಿನಲ್ಲಿ ಮೊಬೈಲ್ ಬಿದ್ದು ಹಾಳಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ!

ಹೊಸದಿಗಂತ ವರದಿ,ಮೈಸೂರು:

ನೀರಿನಲ್ಲಿ ಮೊಬೈಲ್ ಬಿದ್ದು ಹಾಳಾಗಿದ್ದಕ್ಕೆ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಜನತಾ ಕಾಲೋನಿಯಲ್ಲಿ ನಡೆದಿದೆ.
ಮಹೇಂದ್ರ (22)ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಚಿಕನ್ ಅಂಗಡಿಯೊAದರಲ್ಲಿ ಕೆಲಸ ಮಾಡುತ್ತಿದ್ದ. ಮೊಬೈಲ್ ಗೇಮ್‌ಗಳನ್ನು ಹೆಚ್ಚಾಗಿ ಆಡುತ್ತಾ ಕಾಲ ಕಳೆಯುತ್ತಿದ್ದ. ಸಾಲ ಮಾಡಿ ಮೊಬೈಲ್ ತೆಗೆದುಕೊಂಡಿದ್ದ. ಆದರೆ ಮೊಬೈಲ್ ಆಕಸ್ಮಿಕವಾಗಿ ನೀರಿಗೆ ಬಿದ್ದು ಹಾಳಾಗಿದ್ದು, ಅದನ್ನು ರಿಪೇರಿ ಮಾಡಲು ಹೆಚ್ಚಿನ ಹಣ ಬೇಕಾಗಿತ್ತು.
ತನ್ನಲ್ಲಿ ಹಣವಿಲ್ಲ, ಸಾಲ ಕೇಳಿದರೆ ಯಾರೂ ಕೊಡುವುದಿಲ್ಲ ಎಂದು ಮಾನಸಿಕವಾಗಿ ನೊಂದು ಮನೆಯ ಪಕ್ಕದಲ್ಲಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!