ಮತಾಂತರವಾಗಲು ಒಪ್ಪದ ಕುಟುಂಬ: ತಮ್ಮನಿಂದ ಅಣ್ಣನ ಮೇಲೆ ಹಲ್ಲೆ, ದೌರ್ಜನ್ಯ

ಹೊಸದಿಗಂತ ವರದಿ,ಮೈಸೂರು:

ಕ್ರಿಸ್ಟನ್ ಧರ್ಮಕ್ಕೆ ಮತಾಂತರವಾಗುವoತೆ ಎಷ್ಟೇ ಒತ್ತಡ ಹೇರಿದರೂ ಮತಾಂತರವಾಗದ ತನ್ನ ಸ್ವಂತ ಅಣ್ಣ ಹಾಗೂ ಆತನ ಕುಟುಂಬದವರ ಮೇಲೆ ತಮ್ಮನೇ ತನ್ನ ಕುಟುಂದವರೊoದಿಗೆ ಸೇರಿ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಯಾದ ಯದುನಂದನ, ಆತನ ಪತ್ನಿ ಸುಧಾರಾಣಿ ಹಾಗೂ ಮಗಳು ಶಿಲ್ಪಾ ಮತಾಂತರವಾಗದ ಕಾರಣಕ್ಕೆ ತೀವ್ರವಾಗಿ ಹಲ್ಲೆಗೊಳಗಾಗಿ ದೌರ್ಜನ್ಯಕ್ಕೀಡಾದವರು. ಯದುನಂದನ ತಮ್ಮನಾದ ಕೆ.ಮನೋಹರ್ ಎಂಬಾತನೇ ದೌರ್ಜನ್ಯ ನಡೆಸಿದವ.
ಗುರುವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯದುನಂದನ್ ತನ್ನ ಪತ್ನಿ, ಮಗಳು ಹಾಗೂ ಅಳೀಯನೊಂದಿಗೆ ಕಣ್ಣೀರು ಹಾಕುತ್ತಲೇ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆ ಮಾಡಿದ್ದು, ನಾನು ಪತ್ನಿ ಸುಧಾರಾಣಿಯೊಂದಿಗೆ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನನ್ನ ತಂದೆ ಕೃಷ್ಣಪ್ಪರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ತಂದೆಯ ಜಮೀನನ್ನು ಎಲ್ಲರೂ ಸಮನಾಗಿ ಹಂಚಿಕೊoಡಿ, ಬೇರೆ, ಬೇರೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಹಲವು ವರ್ಷಗಳಿಂದ ನನ್ನ ತಮ್ಮನಾದ ಕೆ.ಮನೋಹರ್ ಎಂಬಾತ, ಕೇರಳ, ಮಂಗಳೂರು, ಬೆಳಗಾವಿ ಹೋಗಿ, ಅಲ್ಲಿಯೇ ಸುಮಾರು ವರ್ಷಗಳ ಕಾಲ ಇದ್ದು, ಕ್ರಿಸ್ಟನ್ ಧರ್ಮಕ್ಕೆ ಮತಾಂತರವಾಗಿ ಎಚ್.ಡಿ.ಕೋಟೆಗೆ ಆಗಮಿಸಿ, ಸುತ್ತ ಮುತ್ತಲಿನ ಜನರಿಗೆ ಕ್ರಿಸ್ಟನ್ ಧರ್ಮದವನ್ನು ಪ್ರಚಾರ ಮಾಡುತ್ತಾ, ಹಲವು ಕುಟುಂಬಗಳನ್ನು ಕ್ರಿಸ್ಟನ್ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಅಲ್ಲದೇ ನನಗೂ ಕೂಡ ಕ್ರಿಸ್ಟನ್ ಧರ್ಮಕ್ಕೆ ಮತಾಂತರವಾಗುವoತೆ ಒತ್ತಡ ಹೇರುತ್ತಲೇ ಇದ್ದ. ದೇವರು ಒಬ್ಬನೆ. ಅದುವೆ ಏಸು, ನೀನು ನಿನ್ನ ಮನೆಯಲ್ಲಿಟ್ಟಿರುವ ಎಲ್ಲಾ ಹಿಂದು ದೇವರುಗಳ ಪೋಟೋಗಳನ್ನು ಮನೆಯಿಂದ ಹೊರಗೆ ಹಾಕು, ಯಾಕೇಂದರೆ ಅವರೆಲ್ಲಾ ಸೈತಾನಗಳು. ನೀನು ಆ ಪೋಟೋಗಳನ್ನು ಮನೆಯಿಂದ ಹೊರ ಹಾಕಿ, ಕ್ರಿಸ್ಟನ್ ಧರ್ಮಕ್ಕೆ ಮತಾಂತರವಾದರೆ, ನಿನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂದು ಒತ್ತಾಯಿಸುತ್ತಿದ್ದ. ಆದರೆ ನಾನು ಮತಾಂತರವಾಗುವುದಿಲ್ಲ ಎಂದು ನಿರಾಕರಿಸುತ್ತಲೇ ಇದ್ದೆ. ಇದರಿಂದ ಕುಪಿತನಾದ ಮನೋಹರ, ನನ್ನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ನಮ್ಮ ತಂದೆಯ ಜಮೀನಿನಲ್ಲಿದ್ದ ಮೋಟಾರ್‌ನಿಂದಲೂ ನೀರು ಕೊಡದೆ ಕೃಷಿ ಮಾಡಲು ತೊಂದರೆ ಕೊಡುತ್ತಿದ್ದ. ಯಾಕೇ ಹೀಗೆ ಮಾಡುತ್ತಿದ್ದೀಯಾ ಎಂದು ಕ್ರಿಸ್ಟನ್ ಧರ್ಮಕ್ಕೆ ಮತಾಂತರವಾಗು, ನಿನ್ನ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ ಎಂದು ಆಗ್ರಹಿಸುತ್ತಿದ್ದ. ಇದಕ್ಕೆ ನಾನು ಮಣಿಯದಿದ್ದಾಗ, ಸೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿ, ನನ್ನ ಕೃಷಿ ಪಂಪ್ ಸೆಟ್ ಮೋಟರ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿಸಿದ್ದಾನೆ ಎಂದು ದೂರಿದರು.
ಇಷ್ಟು ಸಾಲದು ಎಂಬoತೆ ಮತಾಂತರವಾಗು ಎಂದು ನನಗೆ ನಿರಂತರವಾಗಿ ಕಿರುಕುಳ ಕೊಡುತ್ತಾ, ಅವಾಶ್ಚ್ಯ ಶಬ್ದಗಳಿಂದ ನಿಂದಿಸುತ್ತಾ, ಗಲಾಟೆ ಮಾಡುತ್ತಲೇ ಬಂದಿದ್ದಾನೆ.
ಇದರಿಂದ ಬೇಸೆತ್ತ ನಾನು ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದಾಗಲೆಲ್ಲಾ, ಪ್ರಭಾವ ಬಳಸಿ, ನನ್ನ ವಿರುದ್ಧ ಸುಳ್ಳು ದೂರುಗಳನ್ನು ನೀಡುತ್ತಾ ಬಂದಿದ್ದಾನೆ. ಡಿ.30 ರಂದು ಗುರುವಾರ ಸಂಜೆ ಕೆ.ಮನೋಹರ ತನ್ನ ಪತ್ನಿ ಭಾಗ್ಯ, ಮಗ ಆಶೀಸ್, ನಿತ್ಯಾನಂದ, ಮದನ್ ಪ್ರಭಾಕರ್, ರಾಧಿಕಾರೊಂದಿಗೆ ಆಗಮಿಸಿ ನನ್ನ ಹಾಗೂ ನನ್ನ ಪತ್ನಿಯ ಮೇಲೆ ದೊಣ್ಣೆ, ಮಚ್ಚಿನಿಂದ ಹಲ್ಲೆ ಮಾಡಿ, ಕೊಲೆ ಮಾಡಲು ಯತ್ನಿಸಿದರು. ನಾವು ಕೂಗಿಕೊಂಡು, ಜನರು ಬರುವುದನ್ನು ನೋಡಿ, ಅಲ್ಲಿಂದ ಓಡಿ ಹೋದರು. ಬಳಿಕ ಸ್ಥಳಕ್ಕೆ ಬಂದ ತುರ್ತು ಚಿಕಿತ್ಸಾ ವಾಹನದಲ್ಲಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆಯನ್ನು ಪಡೆದೆ. ಘಟನೆ ಬಗ್ಗೆ ಎಚ್.ಡಿ.ಕೋಟೆ ಠಾಣೆಯ ಪೊಲೀಸರಿಗೆ ದೂರು ನೀಡಿದೆ. ಈ ಬಗ್ಗೆ ಪೊಲೀಸರು ಕೂಡ ನನ್ನ ತಮ್ಮ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ ಆತನ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ ನಾನು ಮತ್ತೆ ಪೊಲೀಸ್ ಠಾಣೆಗೆ ಹೋಗಿ ನಾನು ಕೊಟ್ಟಿರುವ ದೂರಿನ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ವಿಚಾರಿಸಿದಾಗ, ನಿಮ್ಮ ಮೇಲೂ ದೂರು ಬಂದಿದ್ದು, ನಿಮ್ಮ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಹಾಗಾಗಿ ನಿವೀಬ್ಬರು ರಾಜಿ ಮಾಡಿಕೊಳ್ಳಿ ಎಂದು ಪೊಲೀಸರು ತಿಳಿಸಿದ್ದಾರೆ. ನನ್ನ ತಮ್ಮ ಹಾಗೂ ಆತನ ಉಪಟಳವನ್ನು ನಿಲ್ಲಿಸಿ, ನನಗೆ ಹಾಗೂ ನಮ್ಮ ಕುಟುಂಬದವರಿಗೆ ಜೀವ ರಕ್ಷಣೆ ನೀಡಬೇಕೆಂದು ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!