ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್‌ನಲ್ಲಿ ಚಿಕನ್ ಶವರ್ಮಾ ಆರ್ಡರ್ ಮಾಡಿ ತಿಂದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಸಾವಿಗೆ ಶವರ್ಮಾ ಕಾರಣ ಎಂದು ಶಂಕಿಸಲಾಗಿದೆ.
ಕೇರಳದ ಕೊಚ್ಚಿಯ ಕೊಟ್ಟಾಯಂ ಮೂಲದ ರಾಹುಲ್ ನಾಯರ್ ಆನ್‌ಲೈನ್ ಮೂಲಕ ರೆಸ್ಟೋರೆಂಟ್‌ನಿಂದ ಚಿಕನ್ ಶವರ್ಮಾ ಆರ್ಡರ್ ಮಾಡಿದ್ದರು. ಇದನ್ನು ತಿಂದ ಸ್ವಲ್ಪ ಸಮಯದಲ್ಲೇ ಹುಷಾರಿಲ್ಲದಂತಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿದ್ದು, ಮನೆಗೆ ಬಂದಿದ್ದಾರೆ. ಕೆಲ ದಿನಗಳ ನಂತರ ಮತ್ತೆ ಹೊಟ್ಟೆನೋವು ಕಾಣಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ಹಾಗೂ ಲಿವರ್ ಫೇಲ್ಯೂರ್ ಆಗಿ ಹೃದಯಾಘಾತವಾಗಿ ರಾಹುಲ್ ಮೃತಪಟ್ಟಿದ್ದಾರೆ.
ದೇಹದಲ್ಲಿ ವಿಷ ಸೇರ್ಪಡೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಶವರ್ಮಾದಿಂದಲೇ ಮೃತಪಟ್ಟಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶವರ್ಮಾ ರೆಸ್ಟೋರೆಂಟ್‌ನ್ನು ಮುಚ್ಚಲಾಗಿದ್ದು, ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.