ಹುಲಿ ಉಗುರು ಪೆಂಡೆಂಟ್‌ ಪ್ರಕರಣ: ಸೆಲೆಬ್ರೆಟಿಗಳಾಯ್ತು..ಮತ್ಯಾರ ಮೇಲೆ ಅರಣ್ಯಾಧಿಕಾರಿಗಳ ಕಣ್ಣು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್‌ ಪ್ರಕರಣ ಸದ್ದು ಮಾಡುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೆ ಹುಲಿ ಉಗುರು ಧರಿಸುವವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ತಪಾಸಣೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಅರಣ್ಯಾಧಿಕಾರಿಗಳ ಕಣ್ಣು ಆಭರಣ ವ್ಯಾಪಾರಿಗಳ ಮೇಲೆ ಬಿದ್ದಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ.

ಸಿನಿಮಾ ನಟ, ಸಾಮಾನ್ಯ ಜನರಿಂದ ಆರ್ಡರ್‌ ಪಡೆದು ಹಿಲಿಯುಗುರು ಪೆಂಡೆಂಟ್‌ ತಯಾರಿಸುವ ಆಭರಣ ವ್ಯಾಪಾರಿಗಳತ್ತ ಅರಣ್ಯಧಿಕಾರಿಗಳ ಚಿತ್ತ ನೆಟ್ಟಿದೆ. ವ್ಯಾಪಾರಿಗಳು ಹುಲಿ ಉಗುರು ಎಲ್ಲಿಂದ ತರ್ತಾರೆ? ಇದರ ಹಿಂದೆ ಯಾರ ಕೈವಾಡ ಇದೆ? ಹುಲಿ ಉಗುರನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವವರ್ಯಾರು ಎಂಬ ವಿಚಾರದ ಬಗೆಗೆ ಗಮನ ಹರಿಸಿದ್ದು, ಶೀಘ್ರದಲ್ಲೇ ವ್ಯಾಪಾರಿಗಳ ಮೇಲೂ ದಾಳಿ ನಡೆಸುವ ಸಾಧ್ಯತೆಯಿದೆ.

ಕೇವಲ ಹುಲಿ ಉಗುರು ಮಾತ್ರವಲ್ಲದೆ, ಆನೆ ಬಾಲದ ಕೂದಲು, ದಂತ, ಪ್ರಾಣಿಗಳ ಚರ್ಮ ಮಾರಾಟ ಬಗ್ಗೆಯೂ ಅನುಮಾನವಿದ್ದು, ಈ ಕೋನದಲ್ಲಿಯೂ ತನಿಖೆ ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!