October 11, 2026
Sunday, October 11, 2026
spot_img

ಮಂಗಳೂರಿನ ಪಂಜಿಮೊಗರು ನಿವಾಸಿ ಯುವಕ ನಾಪತ್ತೆ: ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಪಂಜಿಮೊಗರು ನಿವಾಸಿ ಸುನೀಲ (36) ಎಂಬವರು ನಾಪತ್ತೆಯಾಗಿರುವ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಟ್ಟಾರದಲ್ಲಿ ಕಚೇರಿ ಹೊಂದಿರುವ ಸುನೀಲ ಅವರು ಶುಕ್ರವಾರ ಸಂಜೆ ಬಳಿಕ ಕಾಣೆಯಾಗಿದ್ದು, ಅವರ ಸ್ಕೂಟರ್ ಹಾಗೂ ಕಾರು ಕಚೇರಿ ಸಮೀಪ ಪತ್ತೆಯಾಗಿದೆ. ಕುಟುಂಬದವರು ಮತ್ತು ಸ್ನೇಹಿತರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ನಾಪತ್ತೆಯಾಗಿರುವ ಸುನೀಲ ಅವರು ತಿಳಿ ಕಪ್ಪು ಮೈಬಣ್ಣ, ಗೋಧಿ ವರ್ಣ, ಸುಮಾರು 5.9 ಅಡಿ ಎತ್ತರ ಹಾಗೂ ತೆಳು ಮೈಕಟ್ಟು ಹೊಂದಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ 99023 29611 ಸಂಖ್ಯೆಯನ್ನು ಸಂಪರ್ಕಿಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

ಈ ಸಂಬಂಧ ಉರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ಹುಡುಕಾಟ ಕಾರ್ಯವನ್ನು ಆರಂಭಿಸಿದ್ದಾರೆ.

Must Read