ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದ್ದು, ತಿಂಗಳಿಗೆ 13 ಸಾವಿರ ಸಂಬಳ ಪಡೆಯುವ ಗುತ್ತಿಗೆ ನೌಕರನೊಬ್ಬ ಸರಕಾರಕ್ಕೆಯೇ ಪಂಗನಾಮ ಹಾಕಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ.
ಈತ ಸರ್ಕಾರಿ ಇಲಾಖೆಯ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಬರೋಬ್ಬರಿ 21 ಕೋಟಿ ರೂ. ಲೂಟಿ ಮಾಡಿ, ಆ ಹಣದಿಂದ ಗೆಳತಿಗೆ ನಾಲ್ಕು ಬಿಎಚ್‌ಕೆ ಫ್ಲ್ಯಾಟ್, ಐಷಾರಾಮಿ ಕಾರ್ ಗಿಫ್ಟ್ ಮಾಡಿದ್ದಾನೆ. ಇದೀಗ ಈತನ ವಂಚನೆ ಬಟಾಬಯಲಾಗಿದೆ.
ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಿಂಗಳಿಗೆ 13 ಸಾವಿರ ಸಂಬಳ ಪಡೆಯುತ್ತಿದ್ದ ಸರ್ಕಾರಿ ಗುತ್ತಿಗೆ ನೌಕರ ಸರಕಾರಕ್ಕೆ ಟೋಪಿ ಹಾಕಿ ಬರೋಬ್ಬರಿ 21 ಕೋಟಿ ರೂ. ಹಣವನ್ನು ಲೂಟಿ ಮಾಡಿದ್ದಾನೆ. ಹೌದು ಈತ ಛತ್ರಪತಿ ಸಂಭಾಜಿನಗರದ ಕ್ರೀಡಾ ಇಲಾಖೆಯ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. 23 ರ ಹರೆಯದ ಹರ್ಷಲ್ ಕುಮಾರ್ ಕ್ಷೀರಸಾಗರ್ ತನ್ನ ಸಹದ್ಯೋಗಿ ಯಶೋದಾ ಶೆಟ್ಟಿ ಹಾಗೂ ಆಕೆಯ ಪತಿ ಬಿಕೆ ಜೀವನ್ ಜೊತೆ ಸೇರಿ ಈ ವಂಚನೆ ಮಾಡಿದ್ದಾನೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಹರ್ಷಲ್ ಕುಮಾರ್ ತಿಂಗಳಿಗೆ 13 ಸಾವಿರ ಸಂಬಳ ಪಡೆಯುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಈತನ ಜೀವನಶೈಲಿ ಚೇಂಜ್ ಆದದ್ದನ್ನು ಗಮನಿಸಿ ಆತನ ಸಹದ್ಯೋಗಿಗಳು ಶಾಕ್ ಆಗಿದ್ದಾರೆ. ನಂತರ ಹೇಗೋ ಈತನ ವಂಚನೆ ಬಯಲಾಗಿದ್ದು, ಈ ಸುದ್ದಿ ತಿಳಿದು ಎಲ್ಲರು ಬೆಚ್ಚಿ ಬಿದ್ದಿದ್ದಾರೆ.