ಹೊಸದಿಗಂತ ವರದಿ ಕಲಬುರಗಿ:
ಯುವಕರ ಶಕ್ತಿ ಈ ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ರಾಷ್ಟ್ರ ಕಟ್ಟುವ ದಿಶೆಯಲ್ಲಿ ಯುವ ಸಮೂಹ ಸಾಗಬೇಕಾಗಿದೆ ಎಂದು ಬೀದರ್ ಜಿಲ್ಲೆಯ ಕರ್ನಲ್ ಶರಣಪ್ಪಾ ಸಿಕೇನಪುರೆ ತಿಳಿಸಿದರು.
ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 44ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗಿಯಾಗಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರ ಕುರಿತು, ಪರಿಷತ್ತಿನ ಚಟುವಟಿಕೆ, ಪರಿಷತ್ ನಡೆದು ಬಂದ ದಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತಾದ ಪ್ರದರ್ಶನಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಎಬಿವಿಪಿ ಸೇವಾ ಮನೋಭಾವ ನೋಡಿದ್ದೇನೆ.
ದೇಶ ಕಟ್ಟುವ ಕೆಲಸ ಅತ್ಯಂತ ಶ್ಲಾಘನೀಯ. ಪ್ರತಿಯೊಂದು ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಆಗುವ ಸಮಸ್ಯೆ, ರಾಷ್ಟ್ರ ವಿಷಯಕ್ಕೆ ಸಂಬಂಧಿಸಿದಂತೆ ಏನೇ ರಲಿ ಸದಾ ಮುಂಚೂಣಿಯಲ್ಲಿ ಪರಿಷತ್ ಇದಾಗಿದೆ ಎಂದರು.
ಸಾಕಷ್ಟು ಜನ ಎಬಿವಿಪಿ ಮೂಲಕ ಇಂದು ದೊಡ್ಡ ದೊಡ್ಡ ಸ್ಥಾನಗಳಲ್ಲಿ ಇದ್ದಾರೆ.ರಾಜಕೀಯವಾಗಿ ಸಾಮಾಜಿಕವಾಗಿ,ಸೇವೆ ಸಲ್ಲಿಸುತ್ತಿದ್ದಾರೆ. ದೇಶ ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಮುಂದಾಗಬೇಕಿದೆ. ಎಬಿವಿಪಿ ಶಕ್ತಿ ಇಡೀ ಜಗತ್ತಿಗೆ ಪರಿಚಯವಾಗಿದೆ. ನಮ್ಮ ಭಾರತ ಶಕ್ತಿಶಾಲಿ ರಾಷ್ಟ್ರವಾಗಲು ನಾವೆಲ್ಲರೂ ಕೆಲಸ ಮಾಡೋಣ. ಬಲಿಷ್ಠ ರಾಷ್ಟ್ರ ಕಟ್ಟುವ ದಿಶೆಯಲ್ಲಿ ಭಾಗಿಯಾಗುವ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಮಾಡೋಣ ಎಂದರು.
ಪ್ರದರ್ಶನಿಯ ನಂತರ 44ನೇ ಸಮ್ಮೇಳನದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಉತ್ತರ ಪ್ರಾಂತಧ್ಯಕ್ಷ ಆನಂದ ಹೊಸೂರು, ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ಎಬಿವಿಪಿ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಪರಿಷತ್ತಿನ ಪ್ರಾಂತದ ಉಪಾಧ್ಯಕ್ಷ ವಿನಾಯಕ್, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು, ವಿರೇಶ್ ಬಾಳಿಕಾಯಿ,ಹರ ಶಂಕರ್ ಸೇರಿದಂತೆ ಎಬಿವಿಪಿ ಉತ್ತರ ಪ್ರಾಂತದ ಪದಾಧಿಕಾರಿಗಳು, ವಿವಿಧ ಜಿಲ್ಲೆಯಿಂದ ಆಗಮಿಸಿದ ಅಪೇಕ್ಷಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.