Wednesday, November 30, 2022

Latest Posts

ಉರುಸ್ ವೇಳೆ ಹಾಕಿದ್ದ ಹಾಡಿಗೆ ನೃತ್ಯ ಮಾಡಿದ ಯುವಕನಿಗೆ ಹಿಗ್ಗಾಮುಗ್ಗ ಥಳಿತ

ಹೊಸದಿಗಂತ ವರದಿ ವಿಜಯಪುರ:
ಮುಸ್ಲಿಮರ ಉರುಸ್‌ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಹಾಡಿಗೆ ದಲಿತ ಯುವಕನೊಬ್ಬ ನೃತ್ಯ ಮಾಡಿದ್ದರಿಂದ ಕುಪಿತಗೊಂಡ ಕಾರ್ಯಕ್ರಮದಲ್ಲಿದ್ದ 14 ಜನರು ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆಗೈದಿರುವ ಘಟನೆ ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಸಾಗರ್ ಹಲ್ಲೆಗೊಳಗಾದ ಯುವಕ. ಡೋಮನಾಳ ಗ್ರಾಮದ ಉರುಸ್ ವೇಳೆ ಹಾಡೊಂದನ್ನು ಹಾಲಾಗಿತ್ತು. ಈ ಹಾಡಿಗೆ ಸಾಗರ್ ನೃತ್ಯ ಮಾಡುತ್ತಿದ್ದ. ಇದನ್ನು ನೋಡಿ ಹಾಡನ್ನು ಬಂದ್ ಮಾಡಿ, 14 ಜನರು ಸಾಗರ್‌ನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಗಾಯಗೊಂಡಿರುವ ಸಾಗರ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುವಕ ಸಾಗರ್ ಮೇಲೆ ಹಲ್ಲೆಗೈದಿರುವ 14 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!