ಭಾರತ ಪತ್ರಕರ್ತರಿಗೆ ಅತ್ಯಂತ ಅಸುರಕ್ಷಿತವಾ? ರಾಜದೀಪ್ ಸರ್ದೇಸಾಯಿ ಸಂದರ್ಶನದ ತುಣುಕೇಕೆ ವೈರಲ್ ಆಗ್ತಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ʼಕಳೆದೊಂದು ವರ್ಷದಲ್ಲಿ ಚೀನಾವನ್ನು ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಪತ್ರಕರ್ತರ ಬಂಧನವಾಗುತ್ತಿದೆ. ಭಾರತದ ಪತ್ರಿಕೋದ್ಯಮ ಅಪಾಯದಲ್ಲಿದೆʼ ಎಂಬ ಪತ್ರಕರ್ತ ರಾಜ್‌ ದೀಪ್‌ ಸರ್ದೇಸಾಯಿ ಅವರ ಸಂದರ್ಶನದ ತುಣುಕೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ತಮ್ಮ ಎಡಪಂಥೀಯ ನಿಲುವುಗಳಿಂದಲೇ ಗುರುತಿಸಿಕೊಂಡಿರುವ, ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆಳೆದುಕೊಳ್ಳುವ ತಥಾಕಥಿತ ಪತ್ರಕರ್ತ ರಾಜ್‌ ದೀಪ್‌ ಸರ್ದೇಸಾಯಿ ಅವರಿಂದ ಈ ಮಾತುಗಳು ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಈಗಾಗಲೇ ಇಂತಹ ಹಲವಾರು ಸಂದರ್ಶನಗಳಲ್ಲಿ, ವೇದಿಕೆಗಳಲ್ಲಿ ಅಸಂಬದ್ಧ ಮಾತುಗಳನ್ನಾಡಿ ಮುಖಭಂಗಕ್ಕೊಳಗಾದ ಅವರ ಅದೆಷ್ಟೋ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಪ್ರಸ್ತುತ ಇತ್ತಿಚಿನ ವೀಡಿಯೋವೊಂದು ಇದೀಗ ಭಾರೀ ವೈರಲ್‌ ಆಗ್ತಿದೆ. ವೈರಲ್‌ ಆಗ್ತಿರೋದು ರಾಜ್‌ ದೀಪ್‌ ಅವರ ಲೂಸ್‌ ಟಾಕ್‌ ನಿಂದಲ್ಲ, ಬದಲಾಗಿ ಅದಕ್ಕೆ ವಿದೇಶಿಯೊಬ್ಬ ನೀಡಿದ ಉತ್ತರದಿಂದಾಗಿ.

ಇಂಡಿಯಾಟುಡೆ ವೇದಿಕೆಯೊಂದರಲ್ಲಿ ಅಮೆರಿಕ ಖ್ಯಾತ ಸಮಾಜಶಾಸ್ತ್ರಜ್ಞ ಹಾಗೂ ಅಂತರಾಷ್ಟ್ರೀಯ ವಿಶ್ಲೇಷಕ ಸಾಲ್ವಟೋರ್ ಬಾಬೋನ್ಸ್ ಅವರ ಬಳಿ ರಾಜ್‌ ದೀಪ್‌ ಸರ್ದೇಸಾಯಿ ಸಂದರ್ಶನ ಮಾಡುವಾಗ “ಕಳೆದೊಂದು ವರ್ಷದಲ್ಲಿ ಚೀನಾವನ್ನು ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಪತ್ರಕರ್ತರ ಬಂಧನವಾಗುತ್ತಿದೆ. ಇದು ಭಾರತದ ಪ್ರಜಾಪ್ರಭುತ್ವ ಹಾಗೂ ಭಾರತದ ಪತ್ರಿಕೋದ್ಯಮ ಅಸುರಕ್ಷಿತವಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಗಂಟಾಘೋಷವಾಗಿ ಹೇಳುತ್ತಾರೆ. ಹಾಗಿದ್ದರೆ ನಿಜವಾಗಿಯೂ ಭಾರತೀಯ ಪತ್ರಿಕೋದ್ಯಮ ಅಪಾಯದಲ್ಲಿದೆಯಾ? ಭಾರತ ಪತ್ರಕರ್ತರಿಗೆ ಅತ್ಯಂತ ಅಸುರಕ್ಷಿತವಾ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳಬಹುದು. ಇದಕ್ಕೆ ಅಮೆರಿಕದ ಸಾಲ್ವಟೋರ್ ಬಾಬೋನ್ಸ್ ನೀಡುವ ಉತ್ತರ ಸರ್ದೇಸಾಯಿಯವರನ್ನು ದಂಗಾಗಿಸುತ್ತದೆ. ಉತ್ತರ ಕೇಳಿದ ಮರುಕ್ಷಣವೇ ಸರ್ದೇಸಾಯಿ ಉಲ್ಟಾ ಹೊಡೆದುಬಿಡುತ್ತಾರೆ.

ಸಾಲ್ವಟೋರ್ ಬಾಬೋನ್ಸ್ ನೀಡುವ ಉತ್ತರ ಹೀಗಿದೆ “ಭಾರತದಲ್ಲಿ ಚೀನಾವನ್ನು ಬಿಟ್ಟರೆ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಪತ್ರಕರ್ತರ ಮೇಲಿನ ದಾಳಿಯಗುತ್ತಿದೆ ಎಂಬುದು ಕೇಳಲು ಬಹಳ ನಾಟಕೀಯವಾಗಿದೆ. ಪ್ರಾಥಮಿಕ ಅಂಶಗಳನ್ನು ಗಮನಿಸುವುದಾದರೆ ಭಾರತದಲ್ಲಿ ಒಂದು ಬಿಲಿಯನ್‌ ಜನರಿಗೆ 3.5ರಷ್ಟು ಪತ್ರಕರ್ತರು ಸಾವನ್ನಪ್ಪುತ್ತಿದ್ದಾರೆ ಎನ್ನಬಹುದು. ಆದರೆ ಇದು ಜಗತ್ತಿನ ಉಳಿದೆಡೆ 6.3 ರಷ್ಟಿದೆ. ಹಾಗಾಗಿ ಭಾರತವು ಪತ್ರಕರ್ತರಿಗೆ ಅತ್ಯಂತ ಸುರಕ್ಷಿತವಾಗಿದೆ. ಈಗಿನ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ಭಾರತವನ್ನು ಹಾಂಗ್‌ ಕಾಂಗ್‌ ಗಿಂತಲೂ ಕೆಳಗಿರುವುದಾಗಿ ತೋರಿಸುತ್ತದೆ. ಇದು 2022ಕ್ಕಿಂತಲೂ ಹಿಂದಿನದು,ಹಾಂಗ್‌ ಕಾಂಗ್‌ ನಲ್ಲಿನ ಪತ್ರಿಕೆಯೊಂದರ ಪ್ರಕಾಶಕರನ್ನು ಬಂಧಿಸಿ, ಅದರ ಮುದ್ರಣಾಲಯಗಳನ್ನು ನಾಶ ಮಾಡಿದ್ದಕ್ಕಿಂತಲೂ ಹಿಂದಿನದು. ಈಗ ಭಾರತೀಯ ಪತ್ರಕರ್ತರು ಉತ್ತರ ನೀಡಿ, ನೀವು ಹಾಂಗ್‌ ಕಾಂಗ್‌ ಪತ್ರಕರ್ತರಿಗಿಂತಲೂ ತುಳಿತಕ್ಕೊಳಗಾಗಿದ್ದೀರಾ?”.

ಈ ವಿಡಿಯೋ ಇದೀಗ ವೈರಲ್‌ ಆಗ್ತಿದೆ. ಭಾರತದ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಅದೆಷ್ಟೋ ತಥಾಕಥಿತ ಪತ್ರಕರ್ತರಿಗೆ ಮಾರ್ಮಿಕ ಉತ್ತರ ಈ ವೀಡಿಯೋದಲ್ಲೇ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!