ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ರೀಲ್ಸ್ ಮಾಡುವ ಅಭ್ಯಾಸ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಲು ಜನ ರೀಲ್ಸ್ ಮೊರೆ ಹೋಗಿದ್ದು, ರೀಲ್ಸ್ನಿಂದ ಪ್ರಾಣಕ್ಕೇ ಕುತ್ತು ಬರುತ್ತಿದೆ.
ದೊಂಬಿವ್ಲಿಯ ಠಾಕುರ್ಲಿ ಪ್ರದೇಶದಲ್ಲಿ ಯುವಕನೊಬ್ಬ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಹೋಗಿ ಬಾವಿಯೊಳಗೆ ಬಿದ್ದಿದ್ದಾನೆ.
ಬ್ರಿಟಿಷರ ಕಾಲದ ಪಂಪ್ಹೌಸ್ನ ಬಾವಿ ಇದಾಗಿದ್ದು, ಇಲ್ಲಿ ಸ್ನೇಹಿತರ ಜೊತೆ 18 ವರ್ಷದ ಸೊಹೈಲ್ ಶೇಖ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ. ಸತತ 32 ಗಂಟೆಗಳ ಕಾರ್ಯಾಚರಣೆ ನಂತರ ಮೃತದೇಹ ಹೊರತೆಗೆಯಲಾಗಿದೆ. ಸೊಹೈಲ್ ಬಿದ್ದಿದ್ದನ್ನು ಕಣ್ಣಾರೆ ಕಂಡ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸೊಹೈಲ್ ಬದುಕುಳಿಯಲಿಲ್ಲ.
ರೀಲ್ಸ್ ಮಾಡುವುದು ತಪ್ಪು ಎಂದಲ್ಲ, ನಿಮ್ಮ ಸುತ್ತಮುತ್ತ ಇರುವ ಜಾಗ ಅಥವಾ ವಸ್ತು ನಿಮಗೆ ಹಾನಿಕಾರಕವೇ ಎಂಬುದನ್ನು ಒಂದು ಬಾರಿ ಯೋಚಿಸಿ, ಸ್ವಲ್ಪ ಡೇಂಜರ್ ಎನಿಸದರೂ ಆ ಸ್ಥಳದಿಂದ ದೂರ ಇರಿ. ಬದುಕಿದ್ದರೆ ಸಾವಿರಾರು ರೀಲ್ಸ್ ಮಾಡಬಹುದು ಅಲ್ವಾ?