VIRAL VIDEO| ವ್ಹಾವ್‌..ಐಡಿಯಾ ಅಂದ್ರೆ ಇದು, ಇದೇನು ಬೈಕಾ ಇಲ್ಲ ಆಟೋನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿಗೆ ನಮ್ಮ ದೇಶದಲ್ಲಿ ಜನರಲ್ಲಿ ಅಡಗಿರುವ ಪ್ರತಿಭೆಗಳು ಹೊರಬರುತ್ತಿವೆ. ಅಧ್ಯಯನದ ಅಗತ್ಯವಿಲ್ಲದೆ ಅನೇಕ ಅದ್ಭುತ ಪ್ರಯೋಗಗಳಿವೆ. ಇತ್ತೀಚೆಗೆ ಮತ್ತೊಂದು ಪ್ರಯೋಗವು ಜನರನ್ನು ಅದ್ಭುತವಾಗಿ ಆಕರ್ಷಿಸುತ್ತಿದೆ. ಅದರಲ್ಲೂ ವಾಹನಗಳ ವಿಷಯದಲ್ಲಿ, ಸದ್ಯ ಇಂತಹದೊಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕನ್ನು ನಾಲ್ಕು ಚಕ್ರದ ವಾಹನವನ್ನಾಗಿ ಪರಿವರ್ತಿಸಿದ್ದಾನೆ.

ಸಂಚಾರ ನಿಯಮದ ಪ್ರಕಾರ ಬೈಕ್‌ನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಬೇಕು. ಆದ್ರೆ ಈ ಬೈಕ್ ಮೇಲೆ ಒಂದಲ್ಲ ಎರಡಲ್ಲ ಒಂಬತ್ತು ಜನ ಕೂತಿದ್ದಾರೆ. ಇದು ಸಾಧ್ಯವಾ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಜನ. ಮೂವರು ಮಹಿಳೆಯರು ಹಾಗೂ ಐವರು ಮಕ್ಕಳನ್ನು ಕರೆದುಕೊಂಡು ಬೈಕ್ ಹಿಂದೆ ಹಗ್ಗ ಕಟ್ಟಿ ಪ್ರಯಾಣಿಸುತ್ತಿದ್ದಾರೆ.

ಬೈಕ್ ಲಖನೌ-ಅಯೋಧ್ಯೆ ಹೆದ್ದಾರಿಯಲ್ಲಿ ಬಾರಾಬಂಕಿ ಪಟ್ಟಣದ ಮೂಲಕ ಸಾಗುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಒಂಬತ್ತು ಜನರನ್ನು ಕಾರಿನಲ್ಲೇ ಸಾಗಿಸುವುದು ಕಷ್ಟ ಅಂಥದ್ದರಲ್ಲಿ ಈ ವಾಹನ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!