ಅನ್ಯ ಕೋಮಿನ ಯುವತಿಯ ಪ್ರೀತಿಸಿದಕ್ಕೆ ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

 ಹೊಸ ದಿಗಂತ ವರದಿ, ಕಲಬುರಗಿ:

ಅನ್ಯ ಕೋಮಿನ ಯುವತಿ ಪ್ರೀತಿಸಿದಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ವಾಡಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಹ್ಮದ ಶಾಬುದ್ದಿನ್ (19) ಹಾಗೂ ಮಹ್ಮದ ನವಾಜ್ (19) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ವಿಜಯ್ ಕಾಂಬಳೆ ಅನ್ನೋ ಯುವಕ ಹತ್ಯೆ ಮಾಡಿದ ಆರೋಪಿಗಳು ತೆಲೆ ಮರೆಸಿಕೊಂಡಿದ್ದರು.

ಆರೋಪಿ ಶಾಬುದ್ದಿನ್‌ನ ಸಹೋದರಿಯನ್ನ ಕಳೆದ 2 ವರ್ಷದಿಂದ ವಿಜಯ್ ಕಾಂಬಳೆ ಪ್ರೀತಿ ಮಾಡುತ್ತಿದ್ದ, ಹಲವು ಹೇಳಿದರು ಪ್ರೀತಿ ಮಾಡುವದು ನಿಲ್ಲಿಸಿರಲಿಲ್ಲ, ನಿನ್ನೆ ವಾಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಕುಳಿತಿದ್ದ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಕೊಲೆ ಮಾಡಿದ್ದರು.

ಕೊಲೆ ಮಾಡಿದ ನಂತ್ರ ಕಲಬುರಗಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು ಇಬ್ಬರನ್ನು ವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!