Sunday, March 26, 2023

Latest Posts

SHOCKING | ಮೋಸ ಮಾಡಿದ ಬಾಯ್‌ಫ್ರೆಂಡ್ ಮುಖದ ಮೇಲೆ ಕುದಿಯೋ ಎಣ್ಣೆ ಸುರಿದ ಯುವತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋಸ ಮಾಡಿದ ಗರ್ಲ್‌ಫ್ರೆಂಡ್ ಮೇಲೆ ಆಸಿಡ್ ಅಟ್ಯಾಕ್ ಮಾಡಿದ ಪ್ರಕರಣಗಳ ಬಗ್ಗೆ ಕೇಳಿದ್ದೀರಿ, ಆದರೆ ಇಲ್ಲಿ ಯುವತಿಯೊಬ್ಬಳು ಮೋಸ ಮಾಡಿದ ತನ್ನ ಬಾಯ್‌ಫ್ರೆಂಡ್ ಮೇಲೆ ಕುದಿಯುವ ಎಣ್ಣೆ ಸುರಿದಿದ್ದಾಳೆ.

ತಮಿಳುನಾಡಿನ ಈರೋಡ್‌ನಲ್ಲಿ ಘಟನೆ ನಡೆದಿದೆ. ಕಾರ್ತಿ ಹಾಗೂ ಮೀನಾ ಪರಸ್ಪರ ಪ್ರೀತಿಸುತ್ತಿದ್ದರು. ಕಾರ್ತಿ ಮದುವೆಯಾಗುವುದಾಗಿಯೂ ಹೇಳಿದ್ದ.ಆದರೆ ಆತ ಇದ್ದಕ್ಕಿದ್ದಂತೆಯೇ ಮೀನಾ ಜತೆ ಮಾತುಕತೆ ನಿಲ್ಲಿಸಿದ್ದು, ಅವನಿಗೆ ಬೇರೆ ಯುವತಿಯ ಜತೆ ನಿಶ್ವಿತಾರ್ಥವಾಗಿದೆ.

ಇದು ತಿಳಿದ ನಂತರ ಮೀನಾ ಆತನನ್ನು ಕರೆಸಿ ಜಗಳವಾಡಿದ್ದಾಳೆ. ಇದೇ ಜಗಳ ತಾರಕಕ್ಕೇರಿದ್ದು, ಕುದಿಯುವ ಎಣ್ಣೆಯನ್ನು ಆತನ ಮೇಲೆ ಸುರಿದಿದ್ದಾಳೆ. ಮುಖ ಹಾಗೂ ಕೈ ಭಾಗ ಸುಟ್ಟಿದ್ದು, ಆತ ಕೂಗಿದ ಕಾರಣ ನೆರೆಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಮೀನಾರನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!