ಮದುವೆಗೆ ಒಪ್ಪದ ಪ್ರಿಯಕರನ ಮನೆ ಮುಂದೆ ಪ್ರತಿಭಟನೆ ಮಾಡಿದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರೀತಿಸಿದವರು ಮದುವೆಯಾಗಲು ಸಾಮಾನ್ಯವಾಗಿ ಅಡೆತಡೆಗಳು ಇರುವುದು ಸಹಜ. ಅದು ಕುಟುಂಬದ ಕಡೆಯಿಂದ ಇರುವುದು ಅಧಿಕ . ಇಬ್ಬರಲ್ಲಿ ಒಂದು ಕಡೆಯಾದರು ಅಸಮಾಧಾನ ಇದ್ದೇ ಇರುತ್ತದೆ. ಆದ್ರೂ ಕೆಲವೊಮ್ಮೆ ಎಲ್ಲವು ಸರಿಯಾಗಿ ಮದುವೆ ನಡೆಯುತ್ತದೆ.
ಆದ್ರೆ ಇಲ್ಲಿ ಪ್ರಿಯಕರನೇ ಮದುವೆ ನಿರಾಕರಿಸಿದ್ದಾನೆ.

ಹೌದು, ಜಾರ್ಖಂಡ್‌ನ (Jharkhand) ಧನ್‌ಬಾದ್ ಜಿಲ್ಲೆಯಲ್ಲಿತನ್ನನ್ನು ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದರಿಂದ ಕೋಪಗೊಂಡ ಯುವತಿ ಆತನ ಮನೆ ಮುಂದೆ 3 ದಿನ ಪ್ರತಿಭಟನೆ ನಡೆಸಿದ್ದಾಳೆ. ಈ ವಿಷಯ ಊರಿನಲ್ಲಿ ಚರ್ಚೆಯಾಗುತ್ತಿದ್ದಂತೆ ಆತ ಆಕೆಯನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾನೆ.

ಕಳೆದ 4 ವರ್ಷಗಳಿಂದ ಅವರಿಬ್ಬರ ನಡುವೆ ಸಂಬಂಧವಿತ್ತು. ಆದರೆ, ಆತ ಮದುವೆಯಾಗಲು ನಿರಾಕರಿಸಿದ್ದನು. ಇದರಿಂದ ಕೋಪಗೊಂಡ ಆಕೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ 3 ದಿನ ತನ್ನ ಪ್ರೇಮಿಯ ಮನೆ ಎದುರು ಪ್ರತಿಭಟನೆ ನಡೆಸಿದಳು.

ಕೊನೆಗೂ ಆಕೆಯ ಪ್ರತಿಭಟನೆ ವ್ಯರ್ಥವಾಗಲಿಲ್ಲ.ರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಭಾನುವಾರ ಅವರಿಬ್ಬರೂ ವಿವಾಹವಾಗಿದ್ದಾರೆ.
ಮಹೇಶಪುರ ಗ್ರಾಮದ ನಿವಾಸಿ ಉತ್ತಮ್ ಮಹತೋಗೂ ತನಗೂ ಕಳೆದ 4 ವರ್ಷಗಳಿಂದ ಪ್ರೇಮ ಸಂಬಂಧವಿತ್ತು ಎಂದು ಆ ಯುವತಿ ಹೇಳಿದ್ದಾಳೆ. ಆಕೆ ಧನಬಾದ್‌ನ ಎಸ್‌ಎಸ್‌ಎಲ್‌ಎನ್‌ಟಿ ಕಾಲೇಜಿನಲ್ಲಿ ಓದುತ್ತಿದ್ದಾಗ ಉತ್ತಮ್‌ನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು.

ಅವರಿಬ್ಬರ ಕುಟುಂಬದ ಸದಸ್ಯರಿಗೂ ಅವರ ಸಂಬಂಧದ ಬಗ್ಗೆ ತಿಳಿದಿತ್ತು. ಆ ಯುವತಿಯನ್ನು ಮದುವೆಯಾಗುವುದಾಗಿ ಉತ್ತಮ್ ಭರವಸೆ ನೀಡಿದ್ದ. ಇಬ್ಬರೂ ಅನೇಕ ಬಾರಿ ಪರಸ್ಪರರ ಕುಟುಂಬಗಳ ಮನೆಗೆ ಭೇಟಿ ನೀಡಿದ್ದರು.ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ, ದಿನಾಂಕಕ್ಕೆ 20 ದಿನಗಳ ಮೊದಲು ಉತ್ತಮ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!