ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕೆಎಲ್ ರಾಹುಲ್- ಅಥಿಯಾ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಲವು ವರ್ಷಗಳಿಂದ ಪ್ರಣಯ ಪಕ್ಷಿಗಳಂತೆ ಹಾರಿಡಿದ್ದ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ (KL Rahul Athiya Shetty) ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ (Sunil Shetty) ಅವರ ಫಾರ್ಮ್​ ಹೌಸನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಸಂಜೆ 4.15 ರ ಸುಮಾರಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವಿಶೇಷ ಸಂದರ್ಭದಲ್ಲಿ ಉಭಯ ಕುಟುಂಬಗಳ ಅನೇಕ ಆಪ್ತರು ಉಪಸ್ಥಿತರಿದ್ದರು.

ನಟರಾದ ಅಜಯ್ ದೇವಗನ್, ಸಂಜಯ್ ದತ್ತ್ ಮತ್ತು ಕ್ರಿಕೆಟಿಗ ಇಶಾಂತ್ ಶರ್ಮಾ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ನಟ ಸಂಜಯ್ ದತ್ತ್, ರಾಹುಲ್ ಹಾಗೂ ಅಥಿಯಾ ವೈವಾಹಿಕ ಜೀವನಕ್ಕೆ ಕಾಲಿಡುವ ಈ ಸುವರ್ಣ ಗಳಿಗೆಗೆ ಸಾಕ್ಷಿಯಾಗುವಂತೆ ಮಾಡಿದ ಅಣ್ಣ ಸುನೀಲ್ ಶೆಟ್ಟಿಗೆ ಅಭಿನಂದನೆಗಳು. ದಂಪತಿಗಳ ಮುಂದಿನ ಜೀವನ ಪ್ರಯಾಣ ಅದ್ಭುತವಾಗಿರಲಿ ಎಂದು ಹಾರೈಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!