ಹೊಸದಿಗಂತ ಡಿಜಿಟಲ್ ಡೆಸ್ಕ್:
ಯವತಿಯೊಬ್ಬಳು ಮೆಟ್ರೋ ರೈಲು ಬರುತ್ತಿದ್ದಂತೆ ಹಳಿಯಲ್ಲಿ ಓಡಿದ ಘಟನೆ ನಡೆದಿದೆ. ಆದರೆ ಮೆಟ್ರೋ ರೈಲು ಲೋಕೋಪೈಲೆಟ್ ತಕ್ಷಣವೇ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ. ಇತ್ತ ಹಳಿಯಲ್ಲಿ ಪ್ರವಹಿಸುವ ವಿದ್ಯುತ್ ಆಫ್ ಮಾಡಿ ಸಿಬ್ಬಂದಿಗಳು ತೆರಳಿ ಯುವತಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿದೆ.
ರಾಜೇಂದ್ರ ನಗರ ಮೆಟ್ರೋ ನಿಲ್ದಾಣದಲ್ಲಿ ಯುವತಿ ಮೆಟ್ರೋಗಾಗಿ ನಿಂತಿದ್ದಾಳೆ. ಆದರೆ ಮೆಟ್ರೋ ದೂರದಿಂದ ಬರುತ್ತಿರುವುದು ಖಚಿತವಾಗುತ್ತಿದ್ದಂತೆ ಯುವತಿ ಏಕಾಏಕಿ ಹಳಿಗೆ ಹಾರಿ ಮೆಟ್ರೋದತ್ತ ಓಡಿದ್ದಾಳೆ. ತಕ್ಷಣವೇ ಸಿಬ್ಬಂದಿಗಳು ಆಕೆಯನ್ನು ಹಿಡಿಯಲು ಹಿಂದೆ ಓಡಿದ್ದಾರೆ. ಆದರೆ ಯವತಿ ಹಳಿಯಲ್ಲಿ ಆಗಮಿಸುತ್ತಿರುವುದು ಗಮನಿಸಿದ ಮೆಟ್ರೋ ಲೋಕೋ ಪೈಲೆಟ್ ತಕ್ಷಣವೇ ಮೆಟ್ರೋ ನಿಲ್ಲಿಸಿದ್ದಾರೆ. ಇತ್ತ ಸಿಬ್ಬಂದಿಗಳು ಹಳಿಗಳ ಮೇಲೆ ಹರಿಯುತ್ತಿದ್ದ ವಿದ್ಯುತ್ ನಿಲ್ಲಿಸಿದ್ದಾರೆ.
ಮೆಟ್ರೋ ರೈಲಿನ ಬಳಿ ತೆರಳುತ್ತಿದ್ದಂತೆ ಯುವತಿಯನ್ನು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಅವಘಡ ತಪ್ಪಿಸಿದ್ದಾರೆ. ಈ ದೃಶ್ಯ ಸೆರೆಯಾಗಿದೆ.
ಯುವತಿ ಯಾವ ಕಾರಣಕ್ಕಾಗಿ ಹಳಿಯಲ್ಲಿ ಓಡಿದ್ದಾಳೆ. ಮೆಟ್ರೋ ರೈಲಿನತ್ತ ತೆರಳಿದ್ದಾಳೆ ಅನ್ನೋದು ಸ್ಪಷ್ಟವಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಯುವತಿ ಬದುಕು ಅಂತ್ಯಗೊಳಿಸಲು ಈ ರೀತಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.