ಮುಖದಲ್ಲಿ ಧ್ವಜವಿದ್ದ ಯುವತಿಗೆ ಸ್ವರ್ಣ ಮಂದಿರ ಪ್ರವೇಶಕ್ಕೆ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಖದಲ್ಲಿ ಭಾರತದ ಧ್ವಜದ ಚಿತ್ರವನ್ನು ಬಿಡಿಸಿಕೊಂಡಿದ್ದ ಯುವತಿಗೆ ಪಂಜಾಬ್‍ನ ಅಮೃತಸರದಲ್ಲಿರುವ ಸ್ವರ್ಣ ಮಂದಿರದ (Golden Temple) ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.

ಯುವತಿಯೊಬ್ಬಳು (Woman) ಸ್ವರ್ಣ ಮಂದಿರದ ಒಳಗಡೆ ಹೋಗುತ್ತಿದ್ದಂತೆ ಅಲ್ಲಿಯ ಕಾವಲುಗಾರನೊಬ್ಬ ಆಕೆಯನ್ನು ತಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿಯು ಕಾವಲುಗಾರನ ಬಳಿ ಇದು ಭಾರತವಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಆತ ಇದು ಪಂಜಾಬ್ ಎಂದು ಹೇಳುತ್ತಾನೆ. ಅದಾದ ಬಳಿಕ ಆಕೆಯ ಫೋನ್‍ನಲ್ಲಿ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ.
ಘಟನೆಗೆ ಸಂಬಂಧಿಸಿದಂತೆ ಸ್ವರ್ಣ ಮಂದಿರವನ್ನು ನಿರ್ವಹಣೆ ಮಾಡುವ ಶಿರೋಮಣಿ ಗುರುದ್ವಾರ ಪಬರ್ಂಧಕ್ ಸಮಿತಿಯು ಅಧಿಕಾರಿಯ ದುರ್ವರ್ತನೆಗಾಗಿ ಕ್ಷಮೆಯಾಚಿಸಿದೆ. ಆದರೆ ಯುವತಿಯ ಮುಖದ ಮೇಲೆ ಅಶೋಕ ಚಕ್ರವನ್ನು ಹೊಂದಿಲ್ಲದ ಕಾರಣ ಅದು ತ್ರಿವರ್ಣ ಧ್ವಜವಲ್ಲ ಎಂದು ವಾದಿಸಿದೆ.

ಎಸ್‍ಜಿಪಿಸಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ಮಾತನಾಡಿ, ಇದು ಸಿಖ್ ದೇಗುಲವಾಗಿದೆ. ಪ್ರತಿಯೊಂದು ಧಾರ್ಮಿಕ ಸ್ಥಳವು ತನ್ನದೇ ಆದ ಅಲಂಕಾರವನ್ನು ಹೊಂದಿದೆ. ನಾವು ಎಲ್ಲರಿಗೂ ಸ್ವಾಗತಿಸುತ್ತೇವೆ. ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ನಾವು ಕ್ಷಮೆಯಾಚಿಸುತ್ತೇವೆ. ಅವಳ ಮುಖದಲ್ಲಿರುವ ಧ್ವಜವು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ. ಏಕೆಂದರೆ ಅದು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!