ರೈಲ್ವೇ ನಿಲ್ದಾಣದ ಡ್ರಮ್‌ನಲ್ಲಿ ಯುವತಿ ಶವ ಪತ್ತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಗೂಡ್ಸ್ ಪ್ಲಾಟ್​ಫಾರ್ಮ್​ ನ ಡ್ರಾಮ್ ನಲ್ಲಿ ಕೊಳೆತ ಸ್ಥಿತಿಯಲ್ಲಿ 23 ವರ್ಷದ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ.

ತುಂಬಾ ದಿನಗಳ ಹಿಂದೆಯೇ ಇದನ್ನು ಇಲ್ಲಿಡಲಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಅದನ್ನು ತೆರವುಗೊಳಿಸುವ ವೇಳೆ ಡ್ರಮ್ ನಲ್ಲಿ ಮಹಿಳೆ ಶವ ಇರುವುದು ಪತ್ತೆಯಾಗಿದೆ. ಬಾಕ್ಸ್ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಶವವನ್ನು ರೇಲ್ವೆ ನಿಲ್ದಾಣದಲ್ಲಿ ತಂದಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಾಸನೆ ಬರದಂತೆ ಮೃತದೇಹವನ್ನು ಸೀಲ್ಡ್ ಕವರ್​ನಲ್ಲಿ ಹಾಕಿ, ಬಾಕ್ಸ್ ಮಾಡಿ ಇಡಲಾಗಿದೆ.

ಇಂದು ಬೆಳಿಗ್ಗೆ ಕೊಂಚ ಹರಿದ ಕವರ್​ನಿಂದ ವಾಸನೆ ಹೊರಗೆ ಬಂದಿದೆ. ಸಮಯ ಕಳೆದಂತೆ ವಾಸನೆ ಹೆಚ್ಚಾಗಿದೆ. ಆಗ ಸ್ಥಳಿಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಸಂಗತಿ ಇರುವದು ಬಯಲಾಗಿದೆ.
ಶವದ ಕುತ್ತಿಗೆಯಲ್ಲಿ ಬಿಳಿ ಬಣ್ಣದ ದುಪ್ಪಟ್ಟದಿಂದ ಗಂಟು ಬಿಗಿದಿರುವುದು ಪತ್ತೆಯಾಗಿದೆ. ಇದು ಸುಮಾರು 23 ವರ್ಷ ವಯಸ್ಸಿನ ಮಹಿಳೆ ಮೃತದೇಹ ಎಂದು ಅಂದಾಜಿಸಲಾಗಿದೆ. ಇನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಲು ಡ್ರಮ್ ನಲ್ಲಿ ಶವ ಹಾಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಶವ ಕೊಳೆಯುವಂತೆ ಕೆಮಿಕಲ್ ಡ್ರಮ್ ನಲ್ಲಿ ದುಷ್ಕರ್ಮಿಗಳು ಹಾಕಿದ್ದಾರೆ.

ಕಳೆದ ಡಿಸೆಂಬರ್ 6, 2022 ರಂದುನಗರದ ಬೇರೆ ರೈಲು ನಿಲ್ದಾಣದಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಇದು ಸೇರಿ ಎರಡನೇ ಮೃತದೇಹ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!